ಮಾ.13; ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಜಾತ್ರೋತ್ಸವ

0

ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಪ್ರತಿಷ್ಟಾ ಉತ್ಸವ ಹಾಗೂ ಜಾತ್ರೋತ್ಸವವು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ.13 ರಂದು ಜರಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು;
ಮಾ.12ರಂದು ಬೆಳಿಗ್ಗೆ ಗಂಟೆ 10 ರಿಂದ ಬಲಿವಾಡು ಶೇಖರಣೆ ಹಾಗೂ ಹಸಿರುವಾಣಿ ಶೇಖರಣೆ, ಮಾ.13 ರಂದು ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಹೋಮ, ಶ್ರೀ ದೇವರಿಗೆ ಪಂಚವಿಂಶತಿ ಕಲಶ,ಗಂಟೆ 11 ರಿಂದ ಶ್ರೀ ಶಾಂತದುರ್ಗಾ ಭಕ್ತ ವೃಂದ ಶ್ರೀ ಕ್ಷೇತ್ರ ನಿಡ್ಪಳ್ಳಿ ಇವರಿಂದ,ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಗಂಟೆ 6 ರಿಂದ ಗಂಗಾಧರ್ ಮಾರಾರ್ ನೀಲೇಶ್ವರ ಬಳಗದವರಿಂದ ತಾಯಾಂಬಕ,ರಾತ್ರಿ ಗಂಟೆ 7 ರಿಂದ ರಾತ್ರಿ ಪೂಜೆ, ಪ್ರಸಾದ ವಿತರಣೆ ನಂತರ ಶ್ರೀ ಭೂತ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಶ್ರೀ ದೇವರ ಗರ್ಭ ಗೃಹ ಪ್ರವೇಶ, ಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀ ಶಾಂತದುರ್ಗಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here