







ಸವಣೂರು: ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ 4ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9 ರಂದು ನಡೆಯಿತು.


ಮಾ.9 ರಂದು ಬೆಳಿಗ್ಗೆ ಸರ್ವೇಶ್ ಹೆಬ್ಬಾರ್ ಪೆರುವಾಜೆ ಅವರ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ , ಶ್ರೀ ಮಹಾಗಣಪತಿ ಹೋಮ ನಡೆಯಿತು. ಸಂಜೆ ದೈವಕ್ಕೆ ಎಣ್ಣೆ ವೀಳ್ಯ ಕೊಟ್ಟು ,ರಾತ್ರಿ ಶ್ರೀರಾಜಗುಳಿಗ ದೈವದ ನರ್ತನ ಸೇವೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.




ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ರಾಮಕೃಷ್ಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ನಿರ್ದೇಶಕ ಬಿ.ದಯಾಕರ ಆಳ್ವ, ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಕಾರ್ಯದರ್ಶಿ ದೀಕ್ಷಿತ್ ಜೈನ್ ಚೆನ್ನಾವರಗುತ್ತು,
ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆಗುತ್ತು ,ಕೊಳ್ತಿಗೆ ಗ್ರಾ.ಪಂ.ಮಾಜಿ ಸದಸ್ಯರಾದ ಸುನೀಲ್ ರೈ ಪಾಲ್ತಾಡು,ಶುಭಲತಾ ಜೆ.ರೈ, ಸುಂದರ ಪಾಲ್ತಾಡು,ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು,ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು,ರಾಮಕೃಷ್ಣ ಪ್ರಭು,ಯು.ಪಿ.ರೈ ನಡುಬೈಲು, ಮುರುಳ್ಯ ಗ್ರಾ.ಪಂ.ಮಾಜಿ ಅಧ್ಯಕ್ಷೆ ಜಾನಕಿ ಶಾಂತಿನಗರ,ಸವಣೂರು ಗ್ರಾ.ಪಂ.ಮಾಜಿ ಸದಸ್ಯರಾದ ಗಿರಿಶಂಕರ ಸುಲಾಯ, ವಿನೋದಾ ರೈ , ಸತೀಶ್ ಬಲ್ಯಾಯ,ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ದಾಮೋದರ ನಾಯ್ಕ ನಾಗನಮಜಲು, ಪುತ್ತೂರು ಮೆಸ್ಕಾಂ ಅಧಿಕಾರಿ ವಿದ್ಯಾ ಚೆನ್ನಕೇಶವ,ಮಹಾಲಿಂಗ ನಾಯ್ಕ ಪೆಲತಡ್ಕ ,ರವಿಪ್ರಸಾದ್ ಆಳ್ವ ಪಾಲ್ತಾಡು ಹಾಗೂ ಶ್ರೀ ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಂಜಪ್ಪ ರೈ ,ಕಾರ್ಯಾಧ್ಯಕ್ಷ ದೇವರಾಜ ಆಳ್ವ,ಅಧ್ಯಕ್ಷ ಡಾ.ಹರಿಕೃಷ್ಣ ರೈ ಜಿ.ಎನ್.,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಉಪಾಧ್ಯಕ್ಷರಾದ ಸುಧಾಮ ಮಣಿಯಾಣಿ , ಸುಂದರ ನಾಯ್ಕ ,ಜತೆ ಕಾರ್ಯದರ್ಶಿಗಳಾದ ದಿನೇಶ್ ಶಾಂತಿಮೂಲೆ, ಶಶಿಕುಮಾರ್,ಕೋಶಾಧಿಕಾರಿ ಬಾಬು ನಾಯ್ಕ ಶಾಂತಿಮೂಲೆ ಮೊದಲಾದವರಿದ್ದರು.
ಅಚ್ಚುಕಟ್ಟಾದ ವ್ಯವಸ್ಥೆ : ಭಕ್ತಾದಿಗಳಿಂದ ಶ್ಲಾಘನೆ
ಬೆಟ್ಟದ ತುದಿಯಲ್ಲಿ ಇರುವ ಶ್ರೀರಾಜಗುಳಿಗ ಸಾನಿಧ್ಯದಲ್ಲಿ ನೇಮೋತ್ಸವದ ಹಿನ್ನೆಲೆಯಲ್ಲಿ ಮಾಡಿರುವ ವ್ಯವಸ್ಥೆ,ಸಸ್ಯಾಹಾರಿ-ಮಾಂಸಹಾರಿ ಪ್ರತ್ಯೇಕ ಊಟದ ವ್ಯವಸ್ಥೆ ,ಸಂಪರ್ಕ ರಸ್ತೆಯ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಧನಾತ್ಮಕ ಬದಲಾವಣೆಗಳಿಗೆ ಭಕ್ತಾದಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಭಕ್ತರ ಸಂಖ್ಯೆ !
4 ವರ್ಷದ ಹಿಂದೆ ಜೀರ್ಣೋದ್ದಾರಗೊಂಡು ದೈವದ ಪ್ರತಿಷ್ಠೆ ನಡೆದು ದೈವದ ನೇಮೋತ್ಸವ ಪ್ರತೀ ವರ್ಷ ನಡೆಯುತ್ತಿದ್ದು, ಪ್ರತೀ ವರ್ಷದ ನೇಮೋತ್ಸವಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಕ್ಷೇತ್ರದ ದೈವದ ಕಾರಣಿಕತೆಗೆ ಸಾಕ್ಷಿಯಾಗಿದೆ.
ಅಲ್ಲದೇ ಪ್ರತೀ ತಿಂಗಳ 9ನೇ ತಾರೀಕಿನಂದು ನಡೆಯುವ ದೀಪಾರಾಧನೆಯ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಾಡುತ್ತಿದ್ದಾರೆ.










