ಆಲಂಕಾರು ರಚನಾ ಫ್ಯಾನ್ಸಿ ಮಾಲಕಿ ಮಮತಾರವರಿಗೆ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ’

0

ಆಲಂಕಾರು: ಜೇಸಿಐ ಆಲಂಕಾರು ಘಟಕದ ವತಿಯಿಂದ ಮಾರ್ಚ್ ತಿಂಗಳ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪುರಸ್ಕಾರ ಪ್ರದಾನ ಕಾರ್ಯಕ್ರಮ ಬಾಕಿಲ ಹೊಂಬೆಳಕು ಮನೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತದ ವಲಯ 15ರ ಆಡಳಿತ ವಿಭಾಗದ ನಿರ್ದೇಶಕ ಸುಹಾಸ್ ಮರಿಕೆ ಹಾಗೂ ಘಟಕದ ನಿಕಟಪೂರ್ವಾಧ್ಯಕ್ಷ ಗುರುರಾಜ್ ರೈ ಭಾಗವಹಿಸಿದ್ದರು. ಕಳೆದ 23 ವರ್ಷಗಳಿಂದ ಆಲಂಕಾರು ಪೇಟೆಯಲ್ಲಿ ರಚನಾ ಫ್ಯಾನ್ಸಿ ಮತ್ತು ಟೈಲರಿಂಗ್ ಎಂಬ ಉದ್ಯಮ ನಡೆಸುತ್ತಾ, ಗ್ರಾಹಕ ಸ್ನೇಹಿ ವ್ಯವಹಾರವನ್ನು ನಡೆಸುವ ಮೂಲಕ ಹಲವಾರು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿರುವ ಮಮತಾ ಜಿನ್ನಪ್ಪ ಪೂಜಾರಿ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಮಹಿಳಾ ಜೇಸಿ ಅಧ್ಯಕ್ಷೆ ಕೃತಿಕಾ ಟಿ.ರೈ, ಜೆಜೇಸಿ ಅಧ್ಯಕ್ಷೆ ಕೀರ್ತಿ ಶೆಟ್ಟಿ, ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ್ ಸುರ್ಯ ವಂದಿಸಿದರು. ಹೇಮಲತಾ ಪ್ರದೀಪ್ ಸನ್ಮಾನಿತರ ಪರಿಚಯ ಮಾಡಿದರು.

LEAVE A REPLY

Please enter your comment!
Please enter your name here