







ನೆಲ್ಯಾಡಿ: ಕೊಣಾಲು ಹಾಲುಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ವಾರಿಜಾಕ್ಷಿ ಅವರನ್ನು ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.



ಉಷಾ ಅಂಚನ್ ಅವರು ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದು, ವಾರಿಜಾಕ್ಷಿ ಅವರು ನಿರ್ದೇಶಕಿಯಾಗಿದ್ದಾರೆ. ಇಬ್ಬರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಸಂಸ್ಥೆಯ ಉದ್ಯೋಗಿ ಜಿನ್ಸಿ ಅವರ ಸೀಮಂತ ಕಾರ್ಯಕ್ರಮವನ್ನು ಈ ವೇಳೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು, ಪಿಗ್ಮಿ ಸಂಗ್ರಾಹಕರು, ಗ್ರಾಹಕರು ಭಾಗವಹಿಸಿದ್ದರು.













