ಸುದಾನ ಶಾಲಾ ವಿದ್ಯಾರ್ಥಿಗಳು ಶಿಕ್ಷಣ ಮೌಲ್ಯ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

ಪುತ್ತೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಚರಿಸುತ್ತಿರುವ ದಿ ಇಂಟರ್ ನ್ಯಾಷನಲ್ ಸೊಸೈಟಿಯು (ಇಸ್ಕಾನ್) ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಶಿಕ್ಷಣ ಮೌಲ್ಯಗಳು ಪರೀಕ್ಷೆಯಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದರಲ್ಲಿ ವಿದ್ಯಾರ್ಥಿಗಳಾದ ಆಶ್ರಿತ್ ಕೃಷ್ಣರಾವ್ ಡಿ ಪ್ರಥಮ, ಹೃತ್ವಿಕಾ ಆರ್ ನಾಯಕ್ ದ್ವಿತೀಯ ಮತ್ತು ಮಾನ್ವಿ ವಿಶ್ವನಾಥ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭ ನಾಗರಾಜ್ ಅಭಿನಂದಿಸಿದ್ದಾರೆ. ಸುದಾನ ಶಾಲೆಯ ಲಹರಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಈ ಪರೀಕ್ಷೆಯು ನಡೆದಿದ್ದು ಸಹಶಿಕ್ಷಕಿ ಚೇತನಾ ಪಿ.ಕೆ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here