ಬಂಟ್ವಾಳ: MDMA ಮಾದಕ ವಸ್ತು ವಶಕ್ಕೆ – ನಾಲ್ವರು ಆರೋಪಿಗಳ ಬಂಧನ

0

ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಶ್ರಫ್ ಜಿ (38) ಎಂಬಾತ ತನ್ನ ಮನೆಯಲ್ಲಿ ಮಾದಕ ವಸ್ತುವಾದ MDMA ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ-1) ರತ್ನಕುಮಾರ್ ಎಂ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದರು.


ದಾಳಿಯ ವೇಳೆ ಮನೆಯಲ್ಲಿದ್ದ ಅಶ್ರಫ್ ಜಿ ಜೊತೆಗೂಡಿ ಹಫೀಝ್ ಯಾನೆ ಅಪ್ಪಿ, ಅಫ್ಘಾನ್ ಹಾಗೂ ಅಶ್ರಫ್ ಎನ್.ಎ ಎಂಬವರನ್ನು ವಶಕ್ಕೆ ಪಡೆದು ಮನೆಯ ಪರಿಶೀಲನೆ ನಡೆಸಿದಾಗ, ಒಟ್ಟು 17.97 ಗ್ರಾಂ ತೂಕದ ಸುಮಾರು ರೂ. 1,79,700 ಅಂದಾಜು ಮೌಲ್ಯದ MDMA ಮಾದಕ ವಸ್ತು, ಒಂದು ಚೂರಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದೆ. ಪೊಲೀಸರು ಮಾದಕ ವಸ್ತು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಅ.ಕ್ರ 61/2026 ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ NDPS Act 1985ರ ಕಲಂ 8(C), 22(C) ಹಾಗೂ ಆರ್ಮ್ ಅಕ್ಟ್‌ ನ ಕಲಂ 27 ಆಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here