ಪುತ್ತೂರು ಅರುಣ ಸಾರಥಿ ಸಂಘಟನೆಯಿಂದ ಧನಸಹಾಯ

0

ಪುತ್ತೂರು : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿರುವ ಸಾಮೆತಡ್ಕ ನಿವಾಸಿ ಶಶಿ ಕುಮಾರ್ ಇವರಿಗೆ “ಅರುಣ ಸಾರಥಿ” ಚಾಲಕರ ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯವನ್ನು ”ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನೀಡಲಾಯಿತು.

“ಅರುಣ ಸಾರಥಿ” ಸಂಘಟನೆಯ ವತಿಯಿಂದ ಈವರೆಗೆ ಒಟ್ಟು 1,70,000 ರೂಪಾಯಿ ಧನಸಹಾಯವನ್ನು ಸಮಾಜದಲ್ಲಿರುವ ಅಶಕ್ತರಿಗೆ ನೀಡಲಾಗಿದೆ.ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು,ಸ್ವಸ್ತಿಕ್ ತಾರಿಗುಡ್ಡೆ,ಜಯಂತ ಆರ್ಲಪದವು,ಯೋಗೀಶ್ ಸಂಪ್ಯ,ಟ್ರಸ್ಟ್ ನ ಉಪಾಧ್ಯಕ್ಷರಾದ ರವಿ ಕುಮಾರ್ ರೈ ಕೆದಂಬಾಡಿ ಮಠ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here