ವಿದ್ಯುತ್ ಅವಘಡದಿಂದ ಅಡಿಕೆ ಗಿಡಗಳ ನಾಶ : ಆರ್ಯಾಪು ಸಹಕಾರಿ ಸಂಘದಿಂದ ಸಹಾಯ ಪರಿಹಾರ

0

ಪುತ್ತೂರು : ಕಳೆದ ಕೆಲವು ತಿಂಗಳ ಹಿಂದೆ ವಿದ್ಯುತ್ ಅವಘಡದಿಂದ ಕುರಿಯ ನಿವಾಸಿ ಗಣೇಶ್ ರೈ ಬೂಡಿಯಾ‌ರ್‌ ಅವರ 900ಕ್ಕೂ ಅಧಿಕ ಅಡಿಕೆ ಗಿಡ ನಾಶವಾಗಿದ್ದು ತೋಟವು ಬೆಂಕಿಗೆ ಅಹುತಿಯಾಗಿ ಸಂಪೂರ್ಣ ನಾಶವಾಗಿತ್ತು. ಈ ಕುರಿತು ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಆಗ್ರಹಿಸಿದ್ದರು. ಇದೀಗ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ರೂ 25.000 ಸಹಾಯ ಧನ ಮಂಜೂರು ಆಗಿದ್ದು. ಸಹಕಾರಿ ಸಂಘದ ಅಧ್ಯಕ್ಷರಾದ ಎಚ್. ಮಹಮ್ಮದ್ ಅಲಿ ಯವರು ಬೂಡಿಯಾರ್ ಗಣೇಶ್ ರೈ ಯವರಿಗೆ ತನ್ನ ಕಚೇರಿಯಲ್ಲಿ ಸಹಾಯ ಧನದ ಚೆಕ್ಕ್ ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ ಉಪಾಧ್ಯಕ್ಷರಾದ ಸುರೇಂದ್ರ ರೈ ಬಳ್ಳಮಜಲು ನಿರ್ದೇಶಕರು ಗಳಾದ ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಮೂಲೆ ಆರ್ಯಾಪು,ಇಸ್ಮಾಯಿಲ್ ಮಲಾರ್, ಗಣೇಶ್ ರೈ ಬಳ್ಳಮಜಲು, ಸಂಶುದ್ದೀನ್ ನೀರ್ಪಜೆ,ಶೀನಪ್ಪ ಮರಿಕೆ,ತಿಮ್ಮಪ್ಪ ನಾಯ್ಕ್ ಜಂಗಮುಗೇರು, ರಂಜಿತ್ ಬಂಗೇರ ಸಂಪ್ಯ ತೆರೆಜ ಸಿಕ್ವೆರಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತನಗೆ ಸಹಾಯ ಮಾಡಿದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರುಗಳಿಗೆ ಬೂಡಿಯಾರ್ ಗಣೇಶ್ ರೈ ಕೃತಜ್ಞತೆಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here