ಸ್ವಂತ ಘಟಕದಲ್ಲೇ ತಯಾರಿಸುತ್ತಿರುವ ಸುಮಾರು 60 ರಷ್ಟೂ ಗುಣಮಟ್ಟದ , ಸುಗಂಧಭರಿತ ಉತ್ಪನ್ನಗಳು…

0

ಪುತ್ತೂರು :ನೆಲ ,ಟೈಲ್ಸ್ , ಮಾರ್ಬಲ್ , ಅಡುಗೆಮನೆಯ ಮೇಲ್ಮೈ ಯನ್ನು ಶುಚಿಗೊಳಿಸಿ ,ಸೋಂಕು ರಹಿತಗೊಳಿಸಲು ಮತ್ತು ಹೊಳಪು ನೀಡಲು ಬಳಸುವಂತಹ ಶಕ್ತಿಯುತ ದ್ರಾವಣ (ಲಿಕ್ವಿಡ್)ಮತ್ತು ಸುಗಂಧಿತವಾಗಿರಿಸಲು ಉಪಯುಕ್ತವಾಗಿರುವಂತಹ ಕ್ಲೀನಿಂಗ್ ಲಿಕ್ವಿಡ್ ಸಹಿತ ಗೃಹೋಪಯೋಗಿ ಸಾಮಾಗ್ರಿ ಮಾರಾಟ ಮಳಿಗೆ ಈಝಿ ಮ್ಯಾಕ್ಸ್ ಮಿನಿ ಮಾರ್ಟ್ ಮುಖ್ಯರಸ್ತೆ ಸಿಟಿ ಸೆಂಟರ್ ಮಾಲ್ (ಜಿ.ಎಲ್ ವನ್ ಮಾಲ್ ಮುಂಭಾಗ, ಸಂಗೀತಾ ಮೊಬೈಲ್ ಮಳಿಗೆ ಸಮೀಪ) ನಲ್ಲಿ ಮಾ.12 ರಂದು ಶುಭಾರಂಭಗೊಂಡಿತು.


ಎಂ.ಟಿ ರಸ್ತೆ ಬದ್ರಿಯ ಜುಮ್ಮಾ ಮಸೀದಿಯ ಉಸ್ತಾದ್ ಅಬ್ದುಲ್ ರಹಿಮಾನ್ ನವವಿ ಹಾಗೂ ಲಕ್ಷ್ಮೀ ವೆಂಕಟರಮಣ ದೇವಾಲಯದ ಟ್ರಸ್ಟಿ ಚಂದ್ರಕಾಂತ ಭಟ್ ಇವರು ಜತೆಗೂಡಿ ಮಳಿಗೆ ಉದ್ಘಾಟನೆ ನೆರವೇರಿಸಿದರು.


ಬಳಿಕ ಚಂದ್ರಕಾಂತ ಭಟ್ ಮಾತನಾಡಿ , ಎಲ್ಲರಿಗೂ ಬೇಕಾದಂತಹ ಸ್ವಚ್ಚತಾ ಸಾಮಾಗ್ರಿಗಳ ಮಾರಾಟ ಮಳಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿದ್ದು ಸಂತಸದ ವಿಚಾರವೆಂದು ಹೇಳಿದ ಅವರು , ಈ ಮಳಿಗೆಯ ಮೂಲಕ ಎಲ್ಲರಿಗೂ ಸಹಾಯವಾಗಲಿಯೆಂದು ಹಾರೈಸಿದರು.


ಬಪ್ಪಳಿಗೆ ಮಸ್ಜೀದುನ್ನುರ್ ಧಾರ್ಮಿಕ ಕೇಂದ್ರದ ಧರ್ಮಗುರು ಸಿರಾಜುದ್ದೀನ್ ಫೈಝಿ ಮಾತನಾಡಿ , ಮನೆ, ಮಠ ,ಮಂದಿರಗಳನ್ನು ಸುಭ್ರಗೊಳಿಸುವ ಮಳಿಗೆಯೊಂದು ಪುತ್ತೂರಿನಲ್ಲಿ ಆರಂಭಗೊಂಡಿದ್ದು ,ಇಂತಹದೊಂದು ವ್ಯವಹಾರಕ್ಕೆ ಎಲ್ಲಾ ವರ್ಗದ ಗ್ರಾಹಕ ಬೆಂಬಲ ಸಿಗಲಿಯೆಂದು ಹೇಳಿದರು. ವಿನೂತನ ಮಳಿಗೆ ಉತ್ತಮ ರೀತಿಯ ಸೇವೆಯನ್ನು ನೀಡಲಿ ಹಾಗೂ ಪವಿತ್ರ ರಂಝಾನ್ ತಿಂಗಳಿನಲ್ಲಿ ಸೇವೆಗೆ ತೆರೆದುಕೊಂಡ ಮಳಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಲಿಯೆಂದು ಹರಸಿದರು.


ಜಮಾಅತ್ ಕಮಿಟಿ ಪುತ್ತೂರು ಇದರ ಮ್ಯಾನೇಜರ್ ಇಬ್ರಾಹಿಂ ಮುಸ್ಲಿಯಾರ್ , ಅಬ್ದುಲ್ ಹಮೀದ್ ಮಂಗಳೂರು , ಸದಾಶಿವ ಪುಣಚ ಸಹಿತ ಹಲವರು ಅತಿಥಿಗಳು ಹಾಜರಿದ್ದರು.
ಹಸೀಬ್ ಮತ್ತು ಇಮ್ರಾನ್ ಮಂಗಳೂರು ಹಾಗೂ ಕಬೀರ್ ಅತಿಥಿಗಳನ್ನು ಸ್ವಾಗತಿಸಿ , ಸಹಕಾರ ಕೋರಿ , ವಂದಿಸಿದರು.
ಬಳಿಕ ಮಾತನಾಡಿದ ಹಸೀಬ್ , ಕಳೆದ 6 ವರುಷಗಳಿಂದ ಕ್ಲೀನ್ಯಾಕ್ ಎಂಬ ಹಸರಿನಲ್ಲಿ ಸ್ವಂತ ಘಟಕ ಹೊಂದಿ , ಸುಮಾರು 60 ರಷ್ಟು ಸ್ವಚ್ಛಗೊಳಿಸೋ ದ್ರಾವಣವನ್ನು ಮಂಗಳೂರಿನ ನಂತೂರಿನಲ್ಲಿರೋ ಘಟಕದಲ್ಲಿ ತಯಾರಿಸುತ್ತಿದ್ದೇವೆ.


ದ.ಕ. ,ಉಡುಪಿ ಮತ್ತು ಕೇರಳ ಮೊದಲಾದೆಡೆ ಸ್ವಚ್ಛಗೊಳಿಸುವ ದ್ರವ ಉತ್ಪನ್ನಗಳ ಮಾರಾಟವಿದ್ದು , ಗುಣಮಟ್ಟದ ಉತ್ಪನ್ನವನ್ನು ಉತ್ತಮ ಬೆಲೆಯಲ್ಲಿ ಸ್ಕೂಲ್ ,ಕಾಲೇಜು , ಆಸ್ಪತ್ರೆ , ಹೊಟೇಲ್ ಮೊದಲಾದೆಡೆ ಒದಗಿಸುತ್ತಿದ್ದೇವೆ. ಕೆ.ಎಸ್ ಹೆಗ್ಡೆ ಕಾಲೇಜು ಆಸ್ಪತ್ರೆ , ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ , ಅಲೋಸಿಯಸ್ ಕಾಲೇಜ್ ಹಾಗೂ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಸಹಿತ ಹಲವಾರು ಸಂಸ್ಥೆಗಳಿಗೆ ನಮ್ಮ ಕ್ಲೀನಿಂಗ್ ಉತ್ಪನ್ನಗಳ ಪೂರೈಕೆಯು ಇದ್ದು , ಐ ಎಸ್ ಓ ಸರ್ಟೀಫೈಡ್ ಮಾನ್ಯತೆಯನ್ನು ಸಂಸ್ಥೆ ಪಡೆದುಕೊಂಡಿದೆ. ವಿಟ್ಲ ಎಂಪೈರ್ ಮಾಲ್ ಮತ್ತು ಭಟ್ಕಳದಲ್ಲಿ ವ್ಯವಹರಿಸುತ್ತಿರುವ ಈಝಿ ಮ್ಯಾಕ್ಸ್‌‌ ಮಿನಿ ಮಾರ್ಟ್ ನ ಮೂರನೆಯ ಸಂಸ್ಥೆ ಇದೀಗ ಪುತ್ತೂರಿನಲ್ಲಿ ಶುಭಾರಂಭಗೊಂಡಿದ್ದು ,
ಒಂದು ಸಾವಿರ ರೂಪಾಯಿಗಳ ಖರೀದಿಗೆ ಉಚಿತ ಖಚಿತ ಕೊಡುಗೆಗಳು ಕೂಡ ಗ್ರಾಹಕರ ಕೈ ಸೇರಲಿದೆಯೆಂದು ಅವರು ಮಾಹಿತಿ ನೀಡಿ , ಸಹಕಾರ ಯಾಚಿಸಿದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ 7204022020 ಸಂಖ್ಯೆಗೆ ಕರೆಮಾಡುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here