






ಪಾರದರ್ಶಕ, ಗುಣಮಟ್ಟದ ವ್ಯವಹಾರದಿಂದ ಯಶಸ್ಸು ಗಳಿಸಿ-ಅರುಣ್ ಪುತ್ತಿಲ


ಪುತ್ತೂರು: ದರ್ಬೆ ಧನ್ವಂತರಿ ಆಸ್ಪತ್ರೆ ಸಮೀಪ, ಕಾನಾವು ಸ್ಕಿನ್ ಕ್ಲಿನಿಕ್ ಎದುರುಗಡೆಯ ಶ್ರೀಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಶಿವಗಣೇಶ್ ಕರ್ಟನ್ಸ್ ಗ್ಯಾಲರಿ ಮಾ.12ರಂದು ಶುಭಾರಂಭಗೊಂಡಿತು.



ಮುಖ್ಯ ಅತಿಥಿ ಪುತ್ತಿಲ ಪರಿವಾರದ ಟ್ರಸ್ಟ್‌ನ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ, ಅನೇಕ ವರ್ಷದಿಂದ ಈ ಉದ್ಯಮದಲ್ಲಿ ಕೆಲಸ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾದ ಪ್ರಜ್ಞೇಶ್‌ರವರ ಸಾರಥ್ಯದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದೆ. ಯುವಕರು ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಾಗ ಕೆಲವು ಮಂದಿಗೆ ಉದ್ಯೋಗವೂ ದೊರೆಯುತ್ತದೆ. ಮನೆಯ ಅಲಂಕಾರಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳಿಗೆ ಕರ್ಟನ್, ಸೋಫಾಗಳನ್ನು ಪೂರೈಕೆ ಮಾಡುವಲ್ಲಿ ಪಾರದರ್ಶಕವಾದ, ಗುಣಮಟ್ಟದ ವ್ಯವಹಾರಗಳನ್ನು ಮಾಡಿ ಯಶಸ್ಸು ಗಳಿಸಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆ ಆರಂಭವಾಗುವಲ್ಲಿ ದೇವರ ಅನುಗ್ರಹ ಇರಲಿ. ಪುತ್ತೂರಿನ ಎಲ್ಲಾ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಸಹಕಾರ ಕೊಡಿ ಎಂದರು.

ಯೂಟ್ಯೂಬರ್ ವಿ.ಜೆ.ವಿಖ್ಯಾತ್ ಮಾತನಾಡಿ ಪ್ರಜ್ಞೇಶ್‌ರವರ ಕರ್ಟನ್ ಗ್ಯಾಲರಿ ಪ್ರಾರಂಭ ಪಡೆದುಕೊಳ್ಳುತ್ತಿದೆ. ಅವರ ಕನಸಿಗೆ ರಾಘವೇಂದ್ರ ಸ್ವಾಮಿ ಹಾಗೂ ಮಹಾಲಿಂಗೇಶ್ವರ ದೇವರ ಅನುಗ್ರಹ ಇರಲಿ. ಉದ್ಯಮ ಪ್ರಾರಂಭಿಸಲು ಧೈರ್ಯ ಬೇಕು. ಇದರೊಂದಿಗೆ ಹೆಜ್ಜೆ ಇಟ್ಟಾಗ ಗೆಲುವು ಸಿಗುತ್ತದೆ ಎಂದ ಅವರು ಮುಂದೆ ನಾನು ಕೂಡ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದರು.
ಲೀಲಾವತಿ ಮತ್ತು ಚಂದಪ್ಪ ದಾಸ್ ಬಂಟ್ವಾಳ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಲಕರ ತಾಯಿ ಜಯಂತಿ ರಾಧಾಕೃಷ್ಣ, ಅಕ್ಕ ಶ್ವೇತಾ, ಮಾಲಕರ ಬಂಧುಗಳಾದ ರೋಹಿಣಿ ಮತ್ತು ನಾಗೇಶ್ ದಾಸ್ ಪದವಿನಂಗಡಿ, ಶೋಭಾ ಮತ್ತು ವಿಜಯ, ವಿಶ್ವನಾಥ, ಸುರೇಶ, ನೀತು, ನಿಶಾ ಹಾಗೂ ಚಿಕ್ಕಪ್ಪಂದಿರು, ಮಾವಂದಿರು ಹಾಗೂ ವಿವಿಧ ಗಣ್ಯರು ಶುಭಹಾರೈಸಿದರು. ಮಾಲಕರಾದ ಪ್ರಜ್ನೇಶ್ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.
ಶೇ.20ರಷ್ಟು ಆಫರ್:
ಶುಭಾರಂಭದ ಪ್ರಯುಕ್ತ ಮಳಿಗೆಯಲ್ಲಿ ರೂ. 1 ಲಕ್ಷಕ್ಕಿಂತ ಮೇಲ್ಪಟ್ಟು ಖರೀದಿಗೆ ಶೇ.20ರಷ್ಟು ಆಫರ್ ಲಭ್ಯವಿದೆ. ಕರ್ಟೈನ್ಸ್, ಕಾರ್ನರ್ ಸೋಫಾ ಸೆಟ್, ಸೋಫಾ ಸೆಟ್, ಮ್ಯಾಟ್ರೆಸ್ಸೆಸ್, ಕಂಫಾರ್ಟರ‍್ಸ್, ಮೆಮೊರಿ ಫಾಮ್ ಪಿಲ್ಲೊಗಳಿಗೆ ವಿವಿಧ ಆಫರ್‌ಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಒನ್ ಟೈಮ್ ನಮ್ಮ ಮಳಿಗೆಗೆ ಭೇಟಿ ನೀಡಿ
ನಾವು ಕರ್ಟನ್ಸ್, ಬ್ಲೈಂಡ್ಸ್, ವಾಲ್‌ಪೇಪರ‍್ಸ್, ಸೋಫಾಸೆಟ್ ಇದೆ. ನಿಮ್ಮ ಸೈಟ್‌ಗೆ ಬಂದು ಡಿಸೈನ್‌ಗೆ ಅನುಗುಣವಾಗಿ ಬೇಕಾದ ಮಾಡೆಲ್‌ನಂತೆ ಮಾಡಿಕೊಡುತ್ತೇವೆ. ನಮ್ಮ ವರ್ಕ್‌ಶಾಪ್‌ನಲ್ಲೇ ಎಲ್ಲಾ ಐಟಂಗಳು ಉತ್ಪನ್ನವಾಗುತ್ತದೆ. ಕಡಿಮೆ ದರದಲ್ಲಿ ನಾವು ಪೂರೈಕೆ ಮಾಡುತ್ತೇವೆ. ಒನ್ ಟೈಮ್ ನಮ್ಮ ಮಳಿಗೆಗೆ ಭೇಟಿ ನೀಡಿ. ಅಲ್ಲದೆ ಶುಭಾರಂಭದ ಪ್ರಯುಕ್ತ ಶೇ.20ರಷ್ಟು ಆಫರ್ ಹಾಗೂ ವಿವಿಧ ಐಟಂಗಳಿಗೆ ವಿವಿಧ ಆಫರ್‌ಗಳು ಲಭ್ಯವಿದೆ.
ಪ್ರಜ್ಞೇಶ್,ಮಾಲಕರು










