ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ- ಅಧ್ಯಕ್ಷ ಮನೋಹರ ಗೌಡ ಡಿ.ವಿ., ಉಪಾಧ್ಯಕ್ಷೆ ಪ್ರಮೀಳಾ ಪಕ್ಕಳ

0

ಪುತ್ತೂರು: ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮನೋಹರ್ ಗೌಡ ಡಿ.ವಿ ದೇವಸ್ಯ ಹಾಗೂ ಉಪಾಧ್ಯಕ್ಷೆಯಾಗಿ ಪ್ರಮೀಳಾ ಪಕ್ಕಳ ಕುಂಡಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಮಾ.13ರಂದು ಸಂಘದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮನೋಹರ ಗೌಡ ಅವರನ್ನು ಲತಾ ಎ.ಗೌಡ ಅಲಿಮೆ ಸೂಚಿಸಿ, ಅಶೋಕ್ ಕಜೆ ಅನುಮೋದಿಸಿದ್ದರು. ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪ್ರಮೀಳಾ ಪಕ್ಕಳ ಅವರನ್ನು ಮಾಲಿನಿ ಗೌಡ ಬೆಳ್ಳಿಪ್ಪಾಡಿ ಸೂಚಿಸಿ, ದಯಾನಂದ ಗೌಡ ಬಾರ್ತೋಳಿ ಅನುಮೋದಿಸಿದರು. ನಿರ್ದೇಶಕರಾದ ನವೀನ ಗೌಡ ತೆಂಕಪ್ಪಾಡಿ, ರಾಬರ್ಟ್ ವೇಗಸ್ ಕೊಡಿಲು, ಪ್ರೀತಿ ಪಿಂಟೋ ಕೋಡಿಂಬಾಡಿ, ಚೇತನಾ ಕೆ.ವಿ ಗೌಡ ಕೈಲಾಜೆ ಉಪಸ್ಥಿತರಿದ್ದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಸೇಸಪ್ಪ ಗೌಡ ಹಾಗೂ ಹಾಲು ಪರೀಕ್ಷಕಿ ತುಳಸಿ ಸಹಕರಿಸಿದರು.


ಅಭಿನಂದನೆ:
ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ. ವಿಶ್ವನಾಥ ಪೂಜಾರಿ ಕೋರಿಯ, ಗಣೇಶ ಗೌಡ ಬಾರ್ತೋಳಿ ಮೊದಲಾದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here