ವಿಟ್ಲಮುಡ್ನೂರು ಗುಂಪಲಡ್ಕ 4ನೇ ವಾರ್ಡಿನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಶಾಸಕ ಅಶೋಕ್ ರೈ

0

ಪುತ್ತೂರು: ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಗುಂಪಲಡ್ಕ 4ನೇ ವಾರ್ಡಿನಲ್ಲಿ ಸುಮಾರು 15 ದಿನದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು , ಈ ಬಗ್ಗೆ ಪುತ್ತೂರು ಶಾಸಕರ ಗಮನಕ್ಕೆ ತಂದಿದ್ದು, ಶಾಸಕ ಅಶೋಕ್ ಕುಮಾರ್ ರೈ ಯವರ ಸೂಚನೆಯಂತೆ ಎನ್.ಎಸ್ ಕ್ರಸರ್ ನ ಟ್ಯಾಂಕರಿನಲ್ಲಿ ದಡ್ಡಲಡ್ಕ ಪ್ರೇಮರವರ ಮನೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

ಪುತ್ತೂರು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ ರವರ ಮುತುವರ್ಜಿಯಲ್ಲಿ ಪಂಚಾಯತ್ ನವರ ಸಹಕಾರದಿಂದ ವ್ಯವಸ್ಥೆ ಮಾಡಲಾಯಿತು. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ , ರಾಮಣ್ಣ ಪಿಲಿಂಜ, ಎನ್. ಎಸ್ ಕ್ರಸರ್, ನೀರು ನೀಡಿದ ಟ್ರಸ್ಟ್ ನ ಸದಸ್ಯರಾದ ಪ್ರೇಮರವರಿಗೆ ಗುಂಪಲಡ್ಕ ನಿವಾಸಿಗಳು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here