







ಪುತ್ತೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದ.ಕ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ಘಟಕಗಳ ಆಶ್ರಯದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ನೌಕರರ ಜಿಲ್ಲಾ ಶೈಕ್ಷಣಿಕ ಸಮಾವೇಶ, ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಲಿದೆ.


ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್‌ರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ವಹಿಸಲಿದ್ದಾರೆ. ಘನ ಉಪಸ್ಥಿತಿಯಾಗಿ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಮುಖ್ಯ ಅತಿಥಿಗಳಾಗಿ ಶಾಸಕರಾದ ಮಂಗಳೂರು ವಿಧಾನಸಭಾ ಕ್ಷೇತ್ರದ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೂಡಬಿದ್ರೆ ಶಾಸಕ ಉಮಾನಾಥ ಎ.ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಬಿ.ಆರ್, ಧನಂಜಯ ಸರ್ಜಿ, ಬೆಂಗಳೂರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ ಎಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಬೆಂಗಳೂರು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಡಿ.ಎಸ್ ಗಟ್ಟಿ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬಂಟರ ಯಾನೆ ನಾಡವರ ಸಂಘ ಸಂಚಾಲಕ, ನ್ಯಾಯವಾದಿ ದುರ್ಗಾಪ್ರಸಾದ್ ರೈ, ವಿಶೇಷ ಅಭ್ಯಾಗತರಾಗಿ ಪುತ್ತೂರು ತಹಶೀಲ್ದಾರ್ ಬಿ.ಎಸ್ ಕೂಡಲಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ್ ಜಿ.ಎಸ್, ಡಯೆಟ್ ಅಭಿವೃದ್ಧಿ ಉಪನಿರ್ದೇಶಕ ಸದಾನಂದ ಪೂಂಜಾ, ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ರಾಜೇಶ್ವರಿ, ಶಿಕ್ಷಣಾಧಿಕಾರಿಗಳಾದ ವಿಷ್ಣುಪ್ರಸಾದ್ ಸಿ ಪುತ್ತೂರು, ಹೆಚ್.ಆರ್ ಈಶ್ವರ್ ಮಂಗಳೂರು ದಕ್ಷಿಣ, ಜೇಮ್ಸ್ ಕುಟಿನ್ಹಾ ಮಂಗಳೂರು ಉತ್ತರ, ವೀರಭದ್ರಪ್ಪ ಮೂಡಬಿದ್ರೆ, ಪ್ರಶಾಂತ್ ಬೆಳ್ತಂಗಡಿ, ಮಾಲತಿ ಬಂಟ್ವಾಳ, ವೈ.ಎಸ್. ಹರಗಿ ಸುಳ್ಯ ಸಹಿತ ಹಲವರು ಭಾಗವಹಿಸಲಿದ್ದಾರೆ.



ವಿದ್ಯಾರತ್ನ, ಸೇವಾಭೂಷಣ ಪ್ರಶಸ್ತಿ:
ಜಿಲ್ಲೆಯಲ್ಲಿ ಬೋಧಕರ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರುಗಳಾದ ಶಿವಾನಂದ ಕಾಯ್ಕಿಣಿ ಮೂಡಬಿದ್ರೆ, ವಿಷ್ಣುಪ್ರಸಾದ್ ಪುತ್ತೂರು, ಉಮಾ ಎಸ್ ಬೆಳ್ತಂಗಡಿ, ಉಮೇಶ್ ಕೆ.ಆರ್ ಮಂಗಳೂರು, ವಾಸು ಕೆ ಮಂಗಳೂರು ದಕ್ಷಿಣ, ಫ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್ ಬಂಟ್ವಾಳ, ಚಂದ್ರಶೇಖರ್ ಭಟ್ ಎ. ಸುಳ್ಯ ಇವರುಗಳಿಗೆ ವಿದ್ಯಾರತ್ನ ಪ್ರಶಸ್ತಿ, ಬೋಧಕೇತರ ವಿಭಾಗದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸಿದ ನೌಕರರಾದ ಬಾಲು ಡಿ.ಎಂ ಮಂಗಳೂರು, ರೇಗಪ್ಪ ಎಂ ಪುತ್ತೂರು, ನಾಗವೇಣಿ ಜೋಗಿ ಮಂಗಳೂರು ದಕ್ಷಿಣ, ಶ್ರೀರಂಗ ಮಯ್ಯ ಮೂಡಬಿದ್ರೆ, ಶ್ರೀಧರ್ ಬಂಟ್ವಾಳ, ಶಿವಪ್ರಸಾದ್ ಕೆ.ವಿ ಸುಳ್ಯ, ವಾರಿಜ ಬಿ.ಬೆಳ್ತಂಗಡಿ ಇವರುಗಳಿಗೆ ಸೇವಾಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿ:
ಪುತ್ತೂರು ತಾಲೂಕಿನಲ್ಲಿ ಅನುದಾನಿತ ಮತ್ತು ಅನುದಾನ ರಹಿತ ವಿಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಾಧನೆ ಮಾಡುವಲ್ಲಿ ಶ್ರಮ ವಹಿಸಿದ ಸಂಸ್ಥೆಗಳ ಮುಖ್ಯಸ್ಥರು, ಸಂಚಾಲಕರುಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ.ಕೃಷ್ಣ ಭಟ್ ಕೊಂಕೋಡಿ, ಸುದಾನ ವಿದ್ಯಾ ಸಂಸ್ಥೆಗಳ ರೆ.ವಿಜಯ ಹಾರ್ವಿನ್, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಕೆ.ಸೀತಾರಾಮ ರೈ ಸವಣೂರು, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಜಯರಾಮ ಕೆದಿಲಾಯ, ಮರ್ದಾಳ ಬೆಥನಿ ಜೀವನ್‌ಜ್ಯೋತಿ ಸ್ಪೆಷಲ್ ಸ್ಕೂಲ್‌ನ ವಂ|ಸಕರಿಯಾಸ್ ನಂದಿಯಾಟ್, ರಾಮಕುಂಜ ವಿದ್ಯಾವರ್ಧಕ ಸಂಘದ ಸೇಸಪ್ಪ ರೈ ರಾಮಕುಂಜ, ಪುತ್ತೂರು ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳ ಭಗಿನಿ ಪ್ರಶಾಂತಿ ಬಿ.ಎಸ್, ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಅಬ್ದುಲ್ ಅಜೀಜ್, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಹೇಮನಾಥ ಶೆಟ್ಟಿ ಕಾವು, ಪಂಜಳ ಶಾಂತಿಗಿರಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಂ|ಬಿಜು ಕೆ.ಜೆ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಜಯಸೂರ್ಯ ರೈ ಮಾದೋಡಿ, ಕಡಬ ಸೈಂಟ್ ಆ್ಯನ್ಸ್ ವಿದ್ಯಾಸಂಸ್ಥೆಯ ವಂ|ಪೌಲ್ ಪ್ರಕಾಶ್, ಕಡಬ ಸರಸ್ವತಿ ವಿದ್ಯಾಲಯದ ವೆಂಕಟರಮಣ ರಾವ್ ಮಂಕುಡೆ, ಕಡಬ ಕಾನ್ನಾಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಂ|ಜಿಸ್ಕೋನ್ ಜೋಸ್, ನರಿಮೊಗರು ಸರಸ್ವತಿ ವಿದ್ಯಾಲಯದ ಅವಿನಾಶ್ ಕೊಡಂಕೇರಿ, ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಬಶೀರ್ ಇವರುಗಳಿಗೆ ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಶಿಕ್ಷಣ ರತ್ನ ಪ್ರಶಸ್ತಿ:
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಶಿಕ್ಷಕರಾಗಿ ಗುರುತಿಸಲ್ಪಟ್ಟ ಶಿಕ್ಷಕರುಗಳಾದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢಶಾಲಾ ವಿಭಾಗ)ನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ಪುತ್ತೂರು ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಕ್ರಾಸ್ತಾ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯ ಎಂ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಹಿರಿಯ ಪದವೀಧರ ಮುಖ್ಯಗುರು ರಘು ಬಿ ಆರ್, ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶಾಂತಪ್ಪ ಗೌಡ, ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಪ್ರವೀಣಾ ರೈ, ಕಾಂಚನ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಮಯ್ಯ, ಸರ್ವೆ ಹಿರಿಯ ಪ್ರಾಥಮಿಕ ಶಾಲೆಯ ಸತೀಶ್, ಕಡಬ ಕೊಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ, ಎಕ್ಕಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಾಕೇಶ್‌ರವರುಗಳಿಗೆ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗುವುದು. ಇದೇ ಸಂದರ್ಭದಲ್ಲಿ ಜಿಲ್ಲೆ ಹಾಗೂ ತಾಲೂಕಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರತೀಪ ಎ.ಆರ್, ಕೋಶಾಧಿಕಾರಿ ಶ್ರೀಮತಿ ಪ್ರತಿಮಾ ಹೆಬ್ಬಾರ್, ಪುತ್ತೂರು ಹಾಗೂ ಕಡಬ ತಾಲೂಕು ಘಟಕದ ಪದಾಧಿಕಾರಿಗಳಾದ ಅಧ್ಯಕ್ಷ ಮಾಮಚ್ಚನ್ ಎಂ, ಪ್ರಧಾನ ಕಾರ್ಯದರ್ಶಿ ಉದಯ ಎಸ್, ಕೋಶಾಧಿಕಾರಿ ಶ್ರೀಮತಿ ದೇವಕಿ ಜೆ.ಜೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









