ಕ್ಯಾಶ್ಯೋ ಡೇ -2026 : ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ (ನಿತ್ಯ ಚಪಾತಿ) ಇನ್ನೋವೇಟಿವ್ ಎಂಟರ್ ಪ್ರೆನ್ಯೂರ್ ಅವಾರ್ಡ್

0

ಪುತ್ತೂರು : ಭಾ.ಕೃ.ಸಂ.ಪ. ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಆಶ್ರಯದಲ್ಲಿ ಮಾ.‌11ರಂದು ನಡೆದ ಕ್ಯಾಶ್ಯೋ ಡೇ – 2026 ಕಾರ್ಯಕ್ರಮದಲ್ಲಿ ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ (ನಿತ್ಯ ಚಪಾತಿ) ಇನ್ನೋವೇಟಿವ್ ಎಂಟರ್ ಪ್ರೆನ್ಯೂರ್ ಅವಾರ್ಡ್ ನೀಡಿ ಗೌರವಿಸಲಾಯಿತು.


ಮೂಲತಃ ಅಮರಪಡ್ನೂರು ಗ್ರಾಮದ ಇಟ್ಟಿಗುಂಡಿಯವರಾದ ರಾಧಾಕೃಷ್ಣರವರು 2015ರಿಂದ ಪುತ್ತೂರಿನಲ್ಲಿ ನಿಧಿ ಪ್ರಾಡಕ್ಟ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕೃಷಿ ಉತ್ಪನಗಳ ಮೌಲ್ಯ ವರ್ಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಿಲ್ಲೆಟ್ ಉತ್ಪನ್ನಗಳು, ಹಲಸಿನ ಬೀಜದ ಉತ್ಪನ್ನಗಳು, ನಿತ್ಯ ಚಪಾತಿ ಜೊತೆಗೆ ಗೇರು ಬೀಜದ ಬೇರೆ ಬೇರೆ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದೀಗ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಗೇರು ಹಣ್ಣಿನಿಂದ ಬೆಲ್ಲ ಮತ್ತು ಕೇಕ್, ಮೊಳಕೆ ಒಡೆದ ಗೇರು ಬೀಜದಿಂದ ಕುಕ್ಕೀಸ್ ತಯಾರಿಸಿ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಗುರುತಿಸಿ ಕ್ಯಾಶ್ಯೋ ಡೇ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಇಟ್ಟಿಗುಂಡಿಯವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here