







ಪುತ್ತೂರು : ಪುತ್ತೂರು ಸೆಂಟ್ಯಾರು ಸಮೀಪ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಮಾಡಿ ಪರಾರಿಯಾದ ಕಾರಿನ ಚಾಲಕ ಅಪ್ರಾಪ್ತನಾಗಿದ್ದು, ಕಾರಿನ ಮಾಲಕಿಯಾಗಿರುವ ಆತನ ತಾಯಿ ಕೆ.ಎ.ಮಮತಾಜ್ ಎಂಬವರ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾ.12ರಂದು ಸೆಂಟ್ಯಾರು ಬಳಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ, ವಾಹನಗಳಿಗೆ ಕಾರು ಡಿಕ್ಕಿಯಾಗಿ ಪರಾರಿಯಾಗಿತ್ತು. ಬೆನ್ನಟ್ಟಿದ್ದ ಯುವಕರ ತಂಡ ಕಾರನ್ನು ಪೆರಿಗೇರಿ ಸಮೀಪ ತಡೆಹಿಡಿದಿದ್ದರು.ಬೈಕೊಂದರ ಹಿಂಬದಿ ಸವಾರ ರವಿ ಎಂಬವರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಕಾರಿನ ಚಾಲಕ ಅಪ್ರಾಪ್ತ ಎನ್ನುವುದು ತಿಳಿದು ಬಂದಿದೆ.ವಾಹನದ ಮಾಲಕಿಯಾಗಿರುವ ಆತನ ತಾಯಿ ಕೆ.ಎ.ಮಮತಾಜ್ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












