







ಬಡಗನ್ನೂರು: ಪಡುಮಲೆ ಎರುಕೊಟ್ಟದ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ಸಂಕ್ರಮಣ ಅಂಗವಾಗಿ ಶ್ರೀ ನಾಗದೇವರಿಗೆ ಮತ್ತು ನಾಗಬಿರ್ಮೆರಿಗೆ ತಂಬಿಲ ಸೇವೆ ಹಾಗೂ ಮಾತೆ ದೇವಿ ಸ್ವರೂಪಿ ದೖೆಯಿಬೖೆದೇತಿ ವಿಶೇಷ ಪೂಜಾ ಕಾರ್ಯಕ್ರಮ ಮಾ.14ರಂದು ಶ್ರೀ ಸನ್ನಿಧಿಯಲ್ಲಿ ನಡೆಯಿತು.




ಈ ಸಂಧರ್ಭದಲ್ಲಿ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಟ್ಲ, ಟ್ರಸ್ಟಿ ಚರಣ್ ಕೆ ಸಹಿತ ಊರ ಪರವೂರ ನೂರಾರು ಭಕ್ತರು ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.













