






ಪುತ್ತೂರು: ಕಡಬ ತಾಲೂಕಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯ ಉದ್ದೇಶದಿಂದ ಆಲಂಕಾರಿನಲ್ಲಿ ಕೆಪಿಟಿಸಿಎಲ್ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ 110 ಕೆ.ವಿ ಸಾಮಾರ್ಥ್ಯದ ಉಪ ಕೇಂದ್ರದ ಕಾಮಗಾರಿಯನ್ನು ಶೀರ್ಘ್ರವಾಗಿ ಕಾರ್ಯಗತಗೊಳಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಇಂಧನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.


ಆಲಂಕಾರಿನಲ್ಲಿ ಕೆಪಿಟಿಸಿಎಲ್ ವತಿಯಿಂದ 110 ಕೆ.ವಿ ಸಾಮಾರ್ಥ್ಯದ ಉಪ ಕೇಂದ್ರ ಸ್ಥಾಪಿಸಲು ಆಲಂಕಾರಿನಲ್ಲಿ 3 ಎಕ್ರೆ ಜಾಗವನ್ನು 10 ವರ್ಷಗಳ ಹಿಂದೆಯೇ ಕಾದಿರಿಸಲಾಗಿದೆ. ಸದ್ರಿ ಯೋಜನೆಗೆ ಮಾಡಾವು 110 ಕೆವಿ ಉಪಕೇಂದ್ರದಿAದ ಟ್ಯಾಪಿಂಗ್ ಮಾಡಿ ಸವಣೂರು ಮುಖಾಂತರ ಅಲಂಕಾರಿಗೆ ವಿದ್ಯುತ್ ಲೈನ್ ಹಾದು ಬರುವಂತೆ ಯೋಜನೆಯಲ್ಲಿ ಅಂದಾಜಿಸಲಾಗಿತ್ತು. ಸದ್ರಿ ವಿದ್ಯುತ್ ಲೈನ್ ಹಾದು ಬರುವುದಕ್ಕೆ ಆ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಯೋಜನೆಯು ನೆನೆಗುದಿಗೆ ಬಿದ್ದಿತ್ತು. 2026ನೇ ಪೆಬ್ರವರಿ ತಿಂಗಳಲ್ಲಿ ಕೆಪಿಟಿಸಿಎಲ್ ವತಿಯಿಂದ ಉಪ್ಪಿನಂಗಡಿ ಸಮೀಪ ಕರ್ವೆಲ್ ಎಂಬಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 110 ಕೆವಿ ಸಾಮಾರ್ಥ್ಯದ ಉಪ ಕೇಂದ್ರದ ಕಾಮಗಾರಿಗೆ ಪುತ್ತೂರು ಶಾಸಕರಾದ ಆಶೋಕ್ ಕುಮಾರ್ ರೈ ಯವರು ಶಿಲಾನ್ಯಾಸವನ್ನು ನೆರವೇರಿಸಿ, ಮಾತಾನಾಡುವಾಗ, ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 110 ಕೆ.ವಿ ಸಾಮಾರ್ಥ್ಯದ ಉಪಕೇಂದ್ರದ ಕಾಮಗಾರಿಯು ವಿದ್ಯುತ್ ಲೈನ್‌ಗೆ ವಿರೋಧದಿಂದಾಗಿ ಬಾಕಿಯಾಗಿರುವುದನ್ನು ಮನಗಂಡು, ಸದ್ರಿ ಕರ್ವೆಲ್ ಉಪಕೇಂದ್ರದಿAದ ಉಪ್ಪಿನಂಗಡಿ ಮುಖಾಂತರ ಕಡಬ ಹೋಗುವ ರಸ್ತೆ ಬದಿಯಲ್ಲಿ ವಿದ್ಯುತ್ ಲೈನ್ ಮಾಡಿಕೊಂಡು ಯೋಜನೆಯನ್ನು ಪೂರ್ಣಗೊಳಿಸಲು ಇಲಾಖೆಗೆ ಸಲಹೆಯನ್ನು ನೀಡಿದ್ದರು.



ಸದ್ರಿ ಯೋಜನೆಗೆ ಸಂಬAಧಿಸಿ ಸುಳ್ಯ ಶಾಸಕರು ಇಂಧನ ಸಚಿವರಾದ ಕೆ ಜೆ ಜಾರ್ಜ್ ರವರನ್ನು ನಿಯೋಗದೊಂದಿಗೆ ವಿಧಾನಸೌಧದಲ್ಲಿ ಭೇಟಿಮಾಡಿ, ಉಪ್ಪಿನಂಗಡಿಯ ಸಮೀಪದ ಕರ್ವೇಲ್‌ನಿಂದ ವಿದ್ಯುತ್ತ್ ಲೈನ್ ಟ್ಯಾಪಿಂಗ್ ಮಾಡಿ, ಉಪ್ಪಿನಂಗಡಿಯಿAದ ಸುಬ್ರಮಣ್ಯಕ್ಕೆ ಬರುವ ಹೆದ್ದಾರಿಯ ರಸ್ತೆ ಬದಿಯಿಂದ ವಿದ್ಯುತ್ ಲೈನ್ ಹಾದು ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿರುವ 110 ಕೆ.ವಿ ಸಾಮಾರ್ಥ್ಯದ ಉಪಕೇಂದ್ರದ ಕಾಮಗಾರಿಯನ್ನು ಶೀರ್ಘ್ರವಾಗಿ ಕಾರ್ಯಗತಗೊಳಿಸಲು ಕೆಪಿಟಿಸಿಎಲ್ ಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿರುತ್ತಾರೆ.
ಸುಳ್ಯ ಶಾಸಕರೊಂದಿಗೆ ಕಡಬ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಶಾಂತಿಗುರಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷಪ್ರದೀಪ್ ರೈ ಮನವಳಿಕೆ, ಆಲಂಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಕರ ಪೂಜಾರಿ ಕಲ್ಲೇರಿಯವರು ನಿಯೋಗದಲ್ಲಿ ಉಪಸ್ಥಿತರಿದ್ದರು.










