






ಆಲಂಕಾರು: ಶ್ರೀ ದುರ್ಗಾಂಬಾ ಕಲಾ ಸಂಗಮದ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 26ನೇ ಸೇವೆಯಾಗಿ ’ ಕಾಯಕಲ್ಪ’ ಪ್ರಸಂಗದ ತಾಳಮದ್ದಳೆ ನಡೆಯಿತು.



ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಶಿವರಂಜನ್ ಕಡಬ, ಸುಧಾಂಶು ಆಚಾರ್ಯ ಕಲ್ಲಡ್ಕ , ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ (ಶರ್ಯಾತಿ), ನಾರಾಯಣ ಭಟ್ ಆಲಂಕಾರು, ಕೃಷ್ಣಮೂರ್ತಿ ಕೆಮ್ಮಾರ (ಸುಕನ್ಯಾ ), ರಾಮ್ಪ್ರಕಾಶ್ ಕೊಡಂಗೆ (ಚ್ಯವನ ), ಜಯರಾಮ ಗೌಡ ಬಲ್ಯ ನಾಲ್ಗುತ್ತು (ಮದಿರಾಕ್ಷ ಯಕ್ಷ), ಗುರು ಪ್ರಸಾದ್ ಆಲಂಕಾರು (ಅಶ್ವಿನಿ ದೇವತೆಗಳು) ಸಹಕರಿಸಿದರು. ಸೇವಾರ್ಥಿಯಾದ ರಕ್ಷಿತ್ ರಾಜ್ ಮತ್ತು ಮನೆಯವರು ಕೊರಂಬಾಡಿ ಇವರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿತರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಲಾಭಿಮಾನಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಕಲಾ ಸಂಗಮದ ಸದಸ್ಯರಾದ ರಾಘವೇಂದ್ರ ಭಟ್ ತೋಟಂತಿಲ ಸ್ವಾಗತಿಸಿ, ನಾರಾಯಣ ಭಟ್ ಆಲಂಕಾರು ವಂದಿಸಿದರು.












