







ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು, ಪ್ಲಾಸ್ಟಿಕ್ ಚೇಯರ್ ಗಳು, ಬಣ್ಣ -ಬಣ್ಣದ ಬ್ಲಾಂಕೆಟ್ ಗಳೆಲ್ಲವೂ ಕೇವಲ 180 ರೂಪಾಯಿಯಲ್ಲಿ….


ಪುತ್ತೂರು: ಪ್ರಮುಖವಾಗಿ ಮನೆಯ ಯಜಮಾನಿ ಮಹಿಳೆಯರಿಗೆ ಬೇಕಾದಂತಹ ಚೆಂದ-ಚೆಂದದ ಅಡುಗೆ ಮನೆಯ ಅಲ್ಯೂಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳು, ಯುವತಿಯರ, ಮಹಿಳೆಯರ ಮತ್ತು ಮಕ್ಕಳ ಅತ್ಯಾಕರ್ಷಕ ಬ್ಯಾಗ್ ಗಳು, ಮಕ್ಕಳ ಶಾಲಾ ಬ್ಯಾಗ್ ಗಳು, ಸಣ್ಣ ಮಕ್ಕಳ ಆಟಿಕೆಗಳು, ಕಿಟಕಿ, ಬಾಗಿಲ ಪರದೆಗಳು, ಎಲ್ಲಾ ವಯೋಮಾನದವರ ಚಪ್ಪಲಿಗಳು, ಗೋಡೆ ಗಡಿಯಾರಗಳು, ಡೋರ್ ಮ್ಯಾಟ್ಗಳು, ಹಲವಾರು ಕಂಪನಿಯ ಪ್ಲಾಸ್ಟಿಕ್ ಚೇರ್ ಗಳು, ಮನೆ, ಕಛೇರಿಯ ಅಲಂಕಾರಕ್ಕಾಗಿ ಹತ್ತಲವಾರು ಬಗೆಯ ಸಾಮಾಗ್ರಿಗಳ ಸಹಿತ ನೂರಾರು ಬಗೆಯ ಭಿನ್ನ ವಿಭಿನ್ನ ವಸ್ತುಗಳ ಮಾರಾಟ ಮಳಿಗೆ ನ್ಯೂ ಚೆನ್ನೈ ಶಾಪಿಂಗ್ ಹಬ್ಬ ಮತ್ತೆ ಮಾ.15ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಪ್ರಾರಂಭಗೊಂಡಿದೆ.




ಮೊದಲ ದಿನವೇ ಶಾಪಿಂಗ್ ಪ್ರಿಯರು ಅತ್ಯಾಧಿಕ ಸಂಖ್ಯೆಯಲ್ಲಿ ಆಗಮಿಸಿ, ನೆಚ್ಚಿನ ಸಾಮಾಗ್ರಿಗಳ ಖರೀದಿಗೆ ಮುಂದಾದರು. ರಂಝಾನ್ ಹಾಗೂ ಯುಗಾದಿ ಹಬ್ಬದ ಸಲುವಾಗಿ ನ್ಯೂ ಚೆನ್ನೈ ಶಾಪಿಂಗ್ ಅಯೋಜಿಸಿರುವ ಶಾಪಿಂಗ್ ಹಬ್ಬದಲ್ಲಿ ಗ್ರಾಹಕರು ಖರೀದಿಸುವಂತಹ ಯಾವುದೇ ವಸ್ತುಗಳ ಬೆಲೆಯು ಕೇವಲ 180/- ರೂಪಾಯಿ ಮಾತ್ರವೇ ಆಗಿದ್ದು, ಕೆಲ ದಿನಗಳವರೆಗೆ ನಡೆಯಲಿರುವ ಈ ಬೃಹತ್ ಶಾಪಿಂಗ್ ಹಬ್ಬಕ್ಕೆ ಶಾಪಿಂಗ್ ಪ್ರಿಯರು ಹೆಚ್ಚಿನ ಸಹಕಾರ, ಬೆಂಬಲ ನೀಡುವಂತೆ ಆಯೋಜಕರು ವಿನಂತಿಸಿದ್ದಾರೆ.










