







ಪುತ್ತೂರು: ವಾಣಿಜ್ಯೋದ್ಯಮಿ ಪುತ್ತೂರಿನ ಮುರ ನಿವಾಸಿ ಡಾ| ಎಂ. ಸಯ್ಯದ್ ನಝೀರ್‌ರವರಿಗೆ ಪರಿಸರ ಮತ್ತು ಸಮಾಜ ಸೇವೆಗಾಗಿ ಉತ್ತರಖಂಡ್ ರಾಜ್ಯದಲ್ಲಿ ನಡೆದ ಸಮಾರಂಭದಲ್ಲಿ ಇಂಡಿಯನ್ ಸ್ಟಾರ್ ಎಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.



ಆರೋಹಿ ಆಟೋಮೊಬೈಲ್ಸ್ ಹ್ಯಾಂಡ್ ರಿಯಾನ್ಸ್ ಎಂಟರ್‌ಟೈನ್ಮೆಂಟ್ ಮುಂಬೈ ಗ್ಲೋಬಲ್ ರವರ ವತಿಯಿಂದ ಉತ್ತರಖಂಡ್ ಡೆಹರಾಡೂನ್ ಗೇಟ್ ವೇ ಹೋಟೆಲ್ ಸಭಾಂಗಣದಲ್ಲಿ ನಡೆದ 10ನೇ ವರ್ಷದ ಅದ್ದೂರಿಯ ಕಾರ್ಯಕ್ರಮದಲ್ಲಿ ಡಾ| ಸೈಯದ್ ನಝೀರ್ ಸಾಹೇಬ್‌ರವರಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ, ನಟ ಚುಂಕಿಪಾಂಡೆ ರವರು ಪ್ರಶಸ್ತಿ ನೀಡಿ ಗೌರವಿಸಿದರು.




ಈ ಸಂದರ್ಭದಲ್ಲಿ ಶ್ರೀ ಆನಂದಮಹೀ ರಾಜ್ ಮಾತಾ ಅಂಬಿಕಾ ಜಿ ಕೀರ್ ಭವಾನಿ, 40 ರಾಷ್ಟ್ರಗಳ ಪ್ರಶಸ್ತಿ ವಿಜೇತರಾದ ಗೋರಕ್ಷಾ ಪಾರಮಾರ್ಸಿನ್ ಬಸಂತ್ ಗೋಯಲ್, ಡೈರೆಕ್ಟರ್ ಮತ್ತು ನಟ ನಿರ್ಮಾಪಕರುಗಳಾದ ಡಾ| ಅಜಯ್ ಎಂ ಶಾಹಿ, ಕೇಶವ ಮಾಧವ್, ಖ್ಯಾತ ನಟರು, ವ್ಯಾಪಾರ ಉದ್ಯಮಿಗಳು ಉಪಸ್ಥಿತರಿದ್ದರು.

ಡಾ. ಎಂ.ಸಯ್ಯದ್ ನಝೀರ್ ಸಾಹೇಬ್ ರವರು ಪುತ್ತೂರು ಮುರ ನಿವಾಸಿಯಾಗಿದ್ದು ಪ್ರಿಯಾ ಟ್ರಾನ್ಸ್ ಪೋರ್ಟ್ ಮಾಲಕರೂ ಆಗಿದ್ದು. ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರು ವಾಣಿಜ್ಯೋದ್ಯಮದ ಜೊತೆಗೆ ಪರಿಸರ ಹಾಗೂ ಹಸಿರು ಕಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದೆ. ಜೆಮ್ಸ್ ಗೇಟ್ ಜುವೆಲ್ಲರ್ಸ್, ಆಸ್ಟ್ರೋಜೆಮ್ಸ್ ಮತ್ತು ಆಲ್ ಖಿಝರ್ ಪರ್ಫ್ಯೂಮ್ಸ್ ಬ್ರಾಂಡಿನ ಮಾಲಕರಾಗಿರುವ ಇವರು ಒಳನಾಡು ಮೀನುಗಾರಿಕೆ, ಮೀನು ತಳಿಗಳ ಅಭಿವೃದ್ಧಿಯಲ್ಲಿ ಅಂತರ್ರಾಷ್ಟ್ರೀಯ ಪರಿಣಿತರಾಗಿದ್ದಾರೆ.ಮತ್ತು ಹರ್ಮಲ್ ಬಾಕೂರ್ ವಿಜ್ಞಾನಿ. ಕಳೆದ ಹಲವಾರು ವರ್ಷಗಳಿಂದ ಪರಿಸರ ಘನ ತ್ಯಾಜ್ಯ ನಿರ್ವಹಣೆ ಬೋಟಿಂಗ್ ಮತ್ತು ಮೀನುಗಾರಿಕೆ ಪ್ಲಾಸ್ಟಿಕ್ ಮುಕ್ತ ಪರಿಸರ ಗಿಡಮರಗಳ ಹಾಗೂ ನೀರು ಸಂರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ| ಎಂ. ಸಯ್ಯದ್ ನಝೀರ್ ಸಾಹೇಬ್ ರವರು 180ಕ್ಕೂ ಹೆಚ್ಚು ಕೆರೆಗಳು ಮತ್ತು ಕೊಳಗಳನ್ನು ಸ್ವಚ್ಛ ಗೊಳಿಸಿದ್ದಾರೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ಹೆಚ್ಚಿಸುವಿಕೆ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದಾರೆ.










