






ಪುತ್ತೂರು: ಸುಮಾರು 40 ವರುಷಗಳ ಕಾಲ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಐತ್ತಪ್ಪ ನಾಯ್ಕ್ ಗುಂಪೆ ಇವರಿಗೆ ಹೈದರಾಬಾದ್ ಕೇಂದ್ರವಾಗಿ ಕಾರ್ಯಾಚರಿಸುತಿರುವಂತಹ ಬಹುಜನ ಸಾಹಿತ್ಯ ಅಕಾಡಮಿಯು ಇತ್ತೀಚೆಗೆ ವೈದ್ಯರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬಹುಜನ ಸಾಹಿತ್ಯ ಅಕಾಡೆಮಿ ಇದರ ರಾಷ್ಟ್ರೀಯ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ಇವರು ಪ್ರಶಸ್ತಿ ಪ್ರದಾನ ಮಾಡಿ , ಹಾರೈಸಿದರು.



ಐತ್ತಪ್ಪ ನಾಯ್ಕ ಗುಂಪೆ ಕೃಷಿ ಇಲಾಖೆಯ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಆಯುರ್ವೇದ ಔಷಧಿ ಹಾಗೂ ಕಷಾಯಗಳ (Health suppliments) ಬಗ್ಗೆ ಮಾಹಿತಿ ಮತ್ತು ಔಷಧಗಳನ್ನು ಅನಾರೋಗ್ಯಕ್ಕೆ ತುತ್ತಾದವರಿಗೆ ನೀಡಿ ,ಮತ್ತೆ ಅವರನ್ನು ಆರೋಗ್ಯವಂತರನ್ನಾಗಿಸೋ ಕಾಯಕ ಮಾಡುತ್ತಿದ್ದಾರೆ. ಅವರ ಈ ಶ್ರೇಷ್ಠ ಸಮಾಜ ಸೇವೆಯನ್ನು ಮನಗಂಡು , ಅಕಾಡೆಮಿಯು ಆಂಧ್ರ ಪ್ರದೇಶದ ತಿರುಪತಿಯಲ್ಲಿ ಆಯೋಜಿಸಿದ್ದ 18 ನೇಯ ಸೌತ್ ಇಂಡಿಯಾ ಸಮ್ಮೇಳನದಲ್ಲಿ ಈ ರಾಷ್ಟ್ರೀಯ ಮಟ್ಟದ ವೈದ್ಯ ರತ್ನ ಪ್ರಶಸ್ತಿಯನ್ನು ಮಾ.15 ರಂದು ನೀಡಿ ಗೌರವಿಸಿದೆ.



ಪ್ರಸ್ತುತ ಐತ್ತಪ್ಪ ನಾಯ್ಕರು ಕೃಷ್ಣ ನಗರದಲ್ಲಿ ಪತ್ನಿ ಶ್ರೀಮತಿ ರಾಧ ಇವರ ಜೊತೆ ವಾಸವಾಗಿದ್ದು, ಮೂವರು ಪುತ್ರಿಯರು,ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಹೊಂದಿದ್ದು . ಒರ್ವ ಪುತ್ರ ಅಮೇರಿಕಾದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.










