






ಪುತ್ತೂರು:“ಇಲ್ಲೀಗಲ್ ಲೇ ಔಟ್ ವಿಚಾರದಲ್ಲಿ ನಾನು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್)ಹೂಡಿರುವುದಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಅವರು ನನ್ನ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ಎಚ್.ಮಹಮ್ಮದ್ ಆಲಿ ಸ್ಪಷ್ಟನೆ ನೀಡಿದ್ದಾರೆ.


ಉಜ್ವಲ್ ಪ್ರಭು ಅವರ ಕುರಿತು ಅಪಪ್ರಚಾರ ನಡೆಸಿರುವುದಾಗಿ ಆರೋಪಿಸಿ ಬಿಎಲ್ಆರ್.ಪೋಸ್ಟ್ ವೆಬ್ಸೈಟ್ನ ಪಬ್ಲಿಷರ್,ಎಡಿಟರ್ ಹಾಗೂ ಎಚ್.ಮಹಮ್ಮದ್ ಆಲಿಯವರ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸು ದಾಖಲಿಸಿರುವ ಕುರಿತು ಮಾ.15ರ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಮಹಮ್ಮದ್ ಆಲಿಯವರು ಪ್ರತಿಕ್ರಿಯೆ ನೀಡಿದ್ದಾರೆ.



“ಅವರ ಕಂಪೆನಿಯ ಲೇ ಔಟ್ ಇಲ್ಲೀಗಲ್.ನಗರಸಭೆಯ ರಸ್ತೆ ಬಂದ್ ಮಾಡಿದ್ದಾರೆ.ಮಲತ್ಯಾಜ್ಯ ಸಂಸ್ಕರಣಾ ಘಟಕ(ಎಸ್ಟಿಪಿ)ದ ಜಾಗ ಅತಿಕ್ರಮಣ ಮಾಡಿದ್ದಾರೆ.ಬಫರ್ ಝೋನ್ ಬಿಟ್ಟಿಲ್ಲ.ಹೀಗೆ ಹಲವಾರು ಲೋಪಗಳಿಂದ ಕೂಡಿದ ಇಲ್ಲೀಗಲ್ ಲೇಔಟ್ಗೆ ನಗರಸಭೆ ಮತ್ತು ಪುಡಾದವರು ಹಣದ ಒತ್ತಾಸೆಗೆ ಬಲಿಯಾಗಿ ಎಪ್ರೂವಲ್ ಕೊಟ್ಟಿದ್ದಾರೆ.ಅದನ್ನು ಪ್ರಶ್ನಿಸಿ ನಾನು ಹೈಕೋರ್ಟ್ನಲ್ಲಿ ಪಿಐಎಲ್ ಹಾಕಿದ್ದು ಅವರಿಗೆ ನೋಟೀಸ್ ಆಗಿದೆ.ಇವತ್ತಲ್ಲ ನಾಳೆ ಅದು ರದ್ದಾಗುತ್ತದೆ.ಸೈಟ್ ಪಡೆದುಕೊಳ್ಳುವವರು ಜಾಗೃತರಾಗಬೇಕು.ನಗರಸಭೆಯಿಂದ 60 ಲಕ್ಷ ರೂ.ಖರ್ಚು ಮಾಡಿ ಮಾಡಲಾದ ರಸ್ತೆಗೆ ಡ್ಯಾಮೇಜ್ ಮಾಡಿ ಮುಚ್ಚಿ ಹಾಕಿದ್ದಾರೆ.ಈ ಹಣಕ್ಕೆ ಯಾರು ಜವಾಬ್ದಾರಿ.ಒಂದೋ ಅವರಿಂದ ಇಲ್ಲವೇ ನಗರಸಭೆ ಕಮಿಷನರ್ ಅವರಿಂದ ಇದನ್ನು ವಸೂಲಿ ಮಾಡಬೇಕು.ನಾನು ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿರುವುದರಿಂದ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಈ ರೀತಿಯ ಬೆದರಿಕೆಗಳಿಗೆ ನಾನು ಜಗ್ಗವುದಿಲ್ಲ.ನಾನು ದಾಖಲೆಗಳಿಲ್ಲದೆ ಯಾವುದನ್ನೂ ಮಾಡುವುದಿಲ್ಲ.ಈ ವಿಚಾರದಲ್ಲಿಯೂ ಕಾನೂನು ಹೋರಾಟ ಮುಂದುವರಿಸುತ್ತೇನೆ” ಎಂದು ಎಚ್.ಮಹಮ್ಮದ್ ಆಲಿ ಹೇಳಿದ್ದಾರೆ.










