ಶಾಸಕರ ಸ್ಪಂದನೆ :ತ್ವರಿತಗತಿಯಲ್ಲಿ ಕಾಮಗಾರಿ

0

ಆರ್ಯಾಪು ಗ್ರಾಮದ ಕೊಲ್ಯ ಕುಸಿದ ಧರೆಗೆ ತಡೆಗೋಡೆ ನಿರ್ಮಾಣ‌

ಪುತ್ತೂರು: ಸುಮಾರು ಏಳು ವರ್ಷದ ಹಿಂದೆ ಆರ್ಯಾಪು ಗ್ರಾಮದ ಕೊಲ್ಯ ಎಂಬಲ್ಲಿ ಕುಸಿದ ಧರೆಯಿಂದಾಗಿ ಅಪಾಯದಂಚಿನಲ್ಲಿರುವ ನಿವಾಸಿಗಳ ಮನವಿಗೆ ಸ್ಪಂಧಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದಲ್ಲದೆ ಶಿಲಾನ್ಯಾಸ ನೆರವೇರಿಸಿದ್ದು, ಇದೀಗ ಕಾಮಗಾರಿಯೂ ಪ್ರಗತಿಯಲ್ಲಿದೆ.


ಧರೆ ಕುಸಿದ ಸಂದರ್ಭ ಕೊಲ್ಯದ ನಿವಾಸಿಗಳು ಅಪಾಯದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು. ಇಲ್ಲಿಯ ಸಮಸ್ಯೆಯನ್ನು ಈ ಮೊದಲಿನ ಜನಪ್ರತಿನಿಧಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಚುನಾವಣೆಯ ಸಂದರ್ಭ ನಾನು ಶಾಸಕನಾದ ಕೂಡಲೇ ಇಲ್ಲಿಗೆ ಸೂಕ್ತವಾದ ತಡೆಗೋಡೆ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆ ಪ್ರಯುಕ್ತ ಶಾಸಕ ಅಶೋಕ್ ಕುಮಾರ್ ರೈ ರವರು ತಡೆಗೋಡೆ ನಿರ್ಮಾಣಕ್ಕೆ ರೂ.2 ಕೋಟಿ ಅನುದಾನವನ್ನು ಮಂಜೂರುಗೊಳಿಸಿದರು. ಇತ್ತೀಚೆಗೆ ಶಿಲಾನ್ಯಾಸ ನಡೆದು, ತಡೆಗೋಡೆಯ ಕೆಲಸ ಆರಂಭವಾಗಿರುತ್ತದೆ. ಈ ಸಮಸ್ಯೆ ಕುರಿತು ಗ್ರಾಮ ಪಂಚಾಯತ್ ಸದಸ್ಯ ಪವಿತ್ರ ರೈ, ಪೂರ್ಣಿಮಾ ರೈ, ಆರ್ಯಪು ಗ್ರಾಮದ ವಲಯ ಅಧ್ಯಕ್ಷರಾದ ಗಿರೀಶ್ ರೈ ಕೈಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ ಆಳ್ವ, ಜಿಲ್ಲಾ ಗ್ರಾಮಾಂತರ ಪ್ರಚಾರ ಸಮಿತಿಯ ಅಧ್ಯಕ್ಷ ಮಹಮ್ಮದ್ ಹಾಲಿ ಹೆಚ್, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪರೋಕ್ಷಕವಾಗಿ ಶಾಸಕರ ಗಮನಕ್ಕೆ ತಂದಿದ್ದರು ಎಂದು ಕೊಲ್ಯದ ಪದ್ಮನಾಭ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here