







ಅರಿಯಡ್ಕ : ಅರಿಯಡ್ಕ ಗ್ರಾಮದ ಗುಂಡ್ಯಡ್ಕದಲ್ಲಿ ಧರ್ಮ ದೈವ ಪಂಜುರ್ಲಿ,ವರ್ಣರ ಪಂಜುರ್ಲಿ, ಕಲ್ಲುರ್ಟಿ ಮತ್ತು ಕಲ್ಲಾಲ್ದ ಗುಳಿಗ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮ ಶ್ರೀ ಕುಂಟಾರು ವಾಸು ದೇವ ತಂತ್ರಿಯವರ ಆರ್ಶೀವಾದದೊಂದಿಗೆ ಬ್ರಹ್ಮ ಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.


ಮಾ 20 ರಂದು ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನ, ಸುದರ್ಶನ ಹೋಮ,ಪ್ರೇತಾವಾಹನೆ,ಬಾಧಾ ಮೂರ್ತಿಗಳ ಆವಾಹನೆ, ಉಚ್ಛಾಟನೆ ಬಲಿ,ಸ್ಥಳ ಶುದ್ದಿ,ಪ್ರಶಾದ ಶುದ್ದಿ,ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಹಾಂತ ಮುಂತಾದ ದೈವಿಕ ಕಾರ್ಯಗಳು ನಡೆಯಲಿದೆ.ಮಾ 21 ರಂದು ಗಣಪತಿ ಹೋಮ, ಬ್ರಹ್ಮ ಕಲಶ ಪೂಜೆ, ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ನೈಮಿತ್ಯಾದಿಗಳ ನಿರ್ಣಯ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.ಈ ಪುಣ್ಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರು,ಬಂಧು ಮಿತ್ರರು ಹಾಗೂ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ವಾಸು ಪೂಜಾರಿ ಗುಂಡ್ಯಡ್ಕ ತಿಳಿಸಿದ್ದಾರೆ.













