






ಬಡಗನ್ನೂರು : ಕೋಟಿ-ಚೆನ್ನಯರು ಪಡುಮಲೆಯಿಂದ ಹೊರಟು ಬರುವಾಗ ಆಟ ಆಡಿ ವಿಶ್ರಮಿಸಿದ ಪುಣ್ಯ ಕ್ಷೇತ್ರ ಪಾಪೆಮಜಲು ಬೇಂಗತ್ತಡ್ಕ, ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವವು ಮಾ. 22 ರಂದು ಕ್ಷೇತ್ರ ತಂತ್ರಿವರ್ಯರಾದ ಶ್ರೀ ಜನಾರ್ಧನ ಶಾಂತಿ ಒಟ್ಲ ರವರ ನೇತೃತ್ವದಲ್ಲಿ ಜರಗಲಿರುವುದು.


ಭಕ್ತರು ಭಾಗವಹಿಸಿ ಶ್ರೀ ಬ್ರಹ್ಮಬೈದೇರುಗಳ ಗಂಧಪ್ರಸಾದ ಸ್ವೀಕರಿಸಿ ಶ್ರೀ ಬ್ರಹ್ಮಬೈದೇರುಗಳ ಕೃಪೆಗೆ ಪಾತ್ರರಾಗಬೇಕಾಗುವಂತೆ ಗರಡಿ ಆಡಳಿತ ಮೊತ್ತೇಸರ ಕೇಶವ ಎಂ.ಎಸ್. ಶಾಂತಿವನ ಹಾಗೂ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕೆ. ಪೆರೋಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



ಭಜನಾ ಕಾರ್ಯಕ್ರಮ
ಸಂಜೆ ಗಂ 6 ರಿಂದ ಕೌಡಿಚ್ಚಾರ್ ಶ್ರೀ ಕೃಷ್ಣ ಭಜನಾ ಮಂಡಳಿ ಹಾಗೂ ಪೇರಿಗೇರಿ ಮಹಿಳಾ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.










