ಉರ್ಲಾಂಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

0

ಪುತ್ತೂರು: ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಸತ್ಯನಾರಾಯಣನಗರ, ಉಲಾಂಡಿ ಚಾಂದ್ರಮಾನ ಯುಗಾದಿ ಪ್ರಯುಕ್ತ 54ನೇ ವರ್ಷದ ಸತ್ಯನಾರಾಯಣ ಪೂಜೆಯು ಮಾ.20ರಂದು ರಾತ್ರಿ ನಡೆಯಿತು.


ವೆ.ಮೂ. ಬನಾರಿ ಹರಿಪ್ರಸಾದ್ ಭಟ್‌ರ ನೇತೃತ್ವದಲ್ಲಿ ಬೆಳಿಗ್ಗೆ ಸ್ಥಳ ಶುದ್ಧಿ, ಗಣಪತಿ ಹೋಮ, ಅಶ್ವತ್ಥ ಪೂಜೆ, ಸಂಜೆ ಕಲಶ ಪ್ರತಿಷ್ಠೆ, ಸತ್ಯನಾರಾಯಣ ಪೂಜೆ, ಸರಸ್ವತಿ ಭಜನಾ ಮಂದಿರದ ಸದಸ್ಯರಿಂದ ಭಜನೆ, ವೆ.ಮೂ. ವಿಘ್ನೇಶ್ವರ ಭಟ್‌ರವರಿಂದ ಸತ್ಯನಾರಾಯಣ ದೇವರ ಕಥಾಪ್ರವಚನ, ಮಾನಸ ಉರ್ಲಾಂಡಿ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಬಳಿಕ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತಿನಿತ್ಯ ಗುಡಿಯಲ್ಲಿರುವ ದೇವರಿಗೆ ದೀಪ ಹಚ್ಚುತ್ತಿರುವ ಸ್ಥಳೀಯರಾದ ಪ್ರಮೋದ್ ಹೆಗ್ಡೆಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.


ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಎ.ಜೆ. ನಾಕ್, ಅಧ್ಯಕ್ಷ ನಡುಸಾರು ಶಿವ ಭಟ್, ಕಾರ್ಯದರ್ಶಿ ಅಶೋಕ್ ಕುಂಬ್ಲೆ, ಉಪಾಧ್ಯಕ್ಷರಾದ ಕವಿತಾ ನಾರಾಯಣಿ, ಸ್ವರ್ಣಲತಾ ಹೆಗ್ಡೆ, ರಮೇಶ್ ಗೌಡ ಉರ್ಲಾಂಡಿ, ಜೊತೆ ಕಾರ್ಯದರ್ಶಿ ಮೋಹನ್ ನಾಯರ್, ಅನಿಲ್ ಕುಮಾರ್, ಪ್ರವೀಣ್ ಹೆಗ್ಡೆ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಸಮಿತಿ ಸದಸ್ಯರಾದ ಉಮಾಶಂಕರ್ ಭಟ್, ಜನಾರ್ದನ ಗೌಡ, ಪುಷ್ಪರಾಜ್ ಹೆಗ್ಡೆ, ಜಯಂತ್ ಉರ್ಲಾಂಡಿ, ಯೋಗಾನಂದ ರಾವ್, ಶಿವಾನಂದ ಹೆಗ್ಡೆ, ಬಾಲಕೃಷ್ಣ ಭಂಡಾರಿ, ಸತ್ಯಾನಂದ ಭಂಡಾರಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here