ಪಾಂಡೇಲುಗುತ್ತು ಮಲರಾಯ ಮತ್ತು ಪರಿವಾರದ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

0

ಪುತ್ತೂರು: ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪಾಂಡೇಲುಗುತ್ತು ಶ್ರೀಮಲರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮಾ.21ರಂದು ನೆರವೇರಿತು.
ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಗಣಹೋಮ, ಹರಿಸೇವೆಯ ಬಳಿಕ ದೈವಗಳ ಭಂಡಾರ ತೆಗೆದು ಶ್ರೀಮಲರಾಯ ದೈವದ ನೇಮ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪರಿವಾರ ದೈವಗಳ ಭಂಡಾರ ತೆಗೆದ ಬಳಿಕ ಕಲ್ಲುರ್ಟಿ, ಕೊರತಿ ದೈವಗಳ ನೇಮ ರಾತ್ರಿ ಅನ್ನಸಂತರ್ಪಣೆ, ಬಳಿಕ ಧರ್ಮದೈವ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವದೊದಿಗೆ ಸಂಪನ್ನಗೊಂಡಿತು.


ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಶುಕುಂತಳಾ ಟಿ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕಷ್ಣ ರೈ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕುಕ್ಕಾಡಿ ಪ್ರೀತಂ ಪುತ್ತೂರಾಯ, ವಿಟ್ಲ ಅರಮಣೆಯ ಕೃಷ್ಣಯ, ಪಾಂಡೇಲುಗುತ್ತು ತರವಾಡು ಮನೆಯ ಮುಖ್ಯಸ್ಥರು, ಸದಸ್ಯರು ಸಹಿತ ಹಲವು ಮಂದಿ ನೇಮೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here