ಅರಿಯಡ್ಕ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ

0

ಅರಿಯಡ್ಕ: ಶ್ರೀ ಕೃಷ್ಣ ಭಜನಾ ಮಂದಿರ ರಿ. ಕೌಡಿಚ್ಚಾರು ಅರಿಯಡ್ಕ ಇದರ 39ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾ.22ರಂದು ಭಜನಾ ಮಂದಿರದ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಉಪಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ ಮತ್ತು ವಿಶ್ವನಾಥ ರೈ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ, ಜತೆ ಕಾರ್ಯದರ್ಶಿ ಕೊರಗಪ್ಪ ಗೌಡ ಮಡ್ಯಂಗಳ, ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ, ಗೌರವ ಸಲಹೆಗಾರರಾದ ಹರೀಶ್ ರೈ ಜಾರತ್ತಾರು ಮತ್ತು ಕುಂಞಿ ರಾಮ ಮಣಿಯಾಣಿ ಕುತ್ಯಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ಇದರ ಅಧ್ಯಕ್ಷ ರಾಧಾಕೃಷ್ಣ ಗೌಡ ಕನ್ನಯ, ಸದಸ್ಯರಾದ ವಸಂತ ಕುಮಾರ್ ಕೌಡಿಚ್ಚಾರು, ಸುಕುಮಾರ ಕರ್ಕೇರ ಮಡ್ಯಂಗಳ, ಪದ್ಮನಾಭ ಆಚಾರ್ಯ, ಸುಶಾಂತ್ ರೈ ಕುತ್ಯಾಡಿ, ಮೋನಪ್ಪ ಕುಲಾಲ್ ಕೌಡಿಚ್ಚಾರು, ರಾಜೇಶ್ ರೈ ಕುತ್ಯಾಡಿ, ಸುನಿಲ್ ಗುಂಡ್ಯಡ್ಕ, ವಸಂತ ಕುಲಾಲ್ ಆಕಾಯಿ, ಚಂದ್ರ ಜಿ ಕುತ್ಯಾಡಿ, ಸುರೇಶ್ ರೈ ಮಡ್ಯಂಗಳ, ನಾಗೇಶ್ ನಾಯ್ಕ ಗಂಗುಕುಮೇರು, ಜನಾರ್ಧನ ಪೂಜಾರಿ ಬಳ್ಳಿಕಾನ, ಯಕ್ಷಿತಾ ಮರತ್ತ ಮೂಲೆ, ವೇದಾವತಿ ಹೊಸ ಗದ್ದೆ, ಶೇಷಪ್ಪ ನಾಯ್ಕ ಮಾಯಿಲ ಕೊಚ್ಚಿ, ಅಶ್ವಿತ್ ರೈ ಕುತ್ಯಾಡಿ, ಅರ್ಚಕ ಕರುಣಾಕರ ಗೌಡ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here