ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಶಿಷ್ಯ ವೇತನಕ್ಕೆ ಶಮಾ‌ ವಳಕುಂಜ ಆಯ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ 2025 – 26ನೇ ಸಾಲಿನ ಶಿಷ್ಯ ವೇತನಕ್ಕೆ ಕು. ಶಮಾ ವಳಕುಂಜ ಆಯ್ಕೆಯಾಗಿದ್ದಾರೆ.

ಪುತ್ತೂರಿನ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರ ಶಿಷ್ಯೆಯಾಗಿರುವ ಈಕೆ ಕಳೆದ 12 ವರ್ಷಗಳಿಂದ ಭರತನಾಟ್ಯ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ದೇಶೀಯ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ‌ ಪಡೆದಿರುವ ಶಮಾ ಅವರು ಮಹೇಶ್ ವಳಕುಂಜ ಹಾಗೂ ಶಾಲಿನಿ ದಂಪತಿಯ ಪುತ್ರಿ ಹಾಗೂ ಪುತ್ತೂರಿನ ಅಂಬಿಕಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here