ಪುತ್ತೂರು ಮಹಿಳಾ ಬಂಟರ ವಿಭಾಗದ ನೇತೃತ್ವದಲ್ಲಿ ವಿವಾಹ ಕಾರ್‍ಯಕ್ಕೆ ಕರಿಮಣಿ, ದಾರೆಸೀರೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ವಿಭಾಗದ ನೇತ್ರತ್ವದಲ್ಲಿ ಯುಐಎ ಬಂಟರ ಸಂಘ ಹಾಗೂ ಪುತ್ತೂರು ಬಂಟ ಬಂಧುಗಳ ಸಹಕಾರದೊಂದಿಗೆ ಮಾ.22ರಂದು ಜರಗಿದ ಮಹಿಳಾ ಬಂಟರ ವಿಭಾಗದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಕೆದಂಬಾಡಿ ಚಾವಡಿಹೊಸಮನೆ ಶಶಿಕಲಾ ದಾಸಪ್ಪ ರೈರವರ ಪುತ್ರಿಯ ವಿವಾಹ ಕಾರ್‍ಯಕ್ಕೆ ಕರಿಮಣಿ ಸರ, ದಾರೆಸೀರೆಯನ್ನು ನೀಡಲಾಯಿತು. ತಾಲೂಕು ಬಂಟರ ಸಂಘದ ಮಾಜಿ ಕಾರ್‍ಯದರ್ಶಿ ಮೋಹನ್ ರೈ ನರಿಮೊಗರುರವರು ಈ ಕಾರ್‍ಯದಲ್ಲಿ ವಿಶೇಷವಾದ ಪ್ರಯತ್ನ ಮಾಡಿದ್ದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ, ಮಹಿಳಾ ಬಂಟರ ವಿಭಾಗದ ಗೌರವಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಅಧ್ಯಕ್ಷೆ ಗೀತಾ ಮೋಹನ್ ರೈ, ಪೃಧಾನ ಕಾರ್‍ಯದರ್ಶಿ ಕುಸುಮಾ ಶೆಟ್ಟಿ, ಕೋಶಾಧಿಕಾರಿ ಅರುಣಾ ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here