







ಪುತ್ತೂರು: ಮೇ 2 ಮತ್ತು 3ರಂದು ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ದೇವಳದಲ್ಲಿ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಸದಾನಂದ ರವಿ ಅವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಿ. ಜಗನ್ನಾಥ ರೈ ಅವರು ಆಹ್ವಾನ ಪತ್ರಿಕೆಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದರು.



ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಐತಪ್ಪ ನಾಯ್ಕ, ಅನುರಾಧಾ ಕಲ್ಲೂರಾಯ, ದಾಮೋದರ ಗೌಡ, ಅಭಿಕಾಶ್ ಶೆಟ್ಟಿ, ರಾಧಾಕೃಷ್ಣ ಕಲ್ಲೂರಾಯ, ರಕ್ಷಾ ಬಿ. ಶೆಟ್ಟಿ (ಕುಕ್ಕಾಡಿ), ದೇವಸ್ಥಾನದ ಸಿಬ್ಬಂದಿಯಾದ ಚಂದ್ರ, ಮಾಜಿ ಅಧ್ಯಕ್ಷರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾದ ಜಿ. ಮಹಾಬಲ ರೈ ಹಾಗೂ ಇತರೆ ಸಮಿತಿಯ ಸದಸ್ಯರು, ಭಕ್ತಾದಿಗಳು ಮತ್ತು ಅರ್ಚಕರು ಉಪಸ್ಥಿತರಿದ್ದರು.










