






ಪುತ್ತೂರು: ಕೂರ್ನಡ್ಕ ರೇಂಜ್ ಮದ್ರಸಾ ಮ್ಯಾನೇಜ್ ಮೆಂಟ್ ಮತ್ತು ಜಮೀಯ್ಯತುಲ್ ಮುಅಲ್ಲಿಮೀನ್ ಇದರ ಆಶ್ರಯದಲ್ಲಿ ಕೂರ್ನಡ್ಕ ರೇಂಜ್ ವ್ಯಾಪ್ತಿಯ ಮದ್ರಸಗಳ ಮರುಪ್ರಾರಂಭೋತ್ಸವ ಮಾ.28ರಂದು ಕೂರ್ನಡ್ಕ ಮದ್ರಸಾ ಸಭಾಂಗಣದಲ್ಲಿ ನಡೆಯಿತು.



ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ (ಬಂಬ್ರಾಣ) ವಿದ್ಯಾರ್ಥಿಗಳಿಗೆ ಕುರ್ ಆನ್ ಅಕ್ಷರಗಳನ್ನು ಬರೆಸುವ ಮತ್ತು ಪಾರಾಯಣ ಮಾಡಲು ಹೇಳಿಕೊಡುವ ಮೂಲಕ ಮರು ಪ್ರಾರಂಭೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೂರ್ನಡ್ಕ ರೇಂಜ್ ಮದ್ರಸಾ ಮ್ಯಾನೇಜ್ಮೆಂಟ್ ಇದರ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಮಾತನಾಡಿ ಮದ್ರಸಾಗಳಲ್ಲಿ ಸರಕಾರದ ನಿಯಮಾವಳಿಗಳನ್ನು ಅಳವಡಿಸಿ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಒಂದೇ ಸೂರಿನಡಿ ಧಾರ್ಮಿಕ ಮತ್ತು ಸಾಮಾಜಿಕ ಶಿಕ್ಷಣವನ್ನು ನೀಡಲಾಗುತ್ತಿದೆ. 2025-26ರ ಸಾಲಿನಲ್ಲಿ ನಮ್ಮ ರೇಂಜ್ ನ ವಿದ್ಯಾರ್ಥಿಗಳು 99% ಅಂಕ ಗಳಿಸಿ ತೇರ್ಗಡೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗಿದೆ.2026-27ರ ಸಾಲಿನಲ್ಲಿ ಶೇಕಡಾ 100 ಅಂಕ ಗಳಿಸಿ ತೇರ್ಗಡೆಯಾಗುವ ಮೂಲಕ ಜಿಲ್ಲಾ ಮಟ್ಟದಲ್ಲಿ ಕೂರ್ನಡ್ಕ ರೇಂಜ್ ಪ್ರಥಮ ಸ್ಥಾನಕ್ಕೇರುವಂತಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಅಬ್ದುಲ್ ಖಾದರ್ ಅಲ್ ಖಾಸಿಮಿ (ಬಂಬ್ರಾಣ) ಅವರನ್ನು ರೇಂಜ್ ವತಿಯಿಂದ ಸನ್ಮಾನಿಸಲಾಯಿತು.




ಕೂರ್ನಡ್ಕ ಮದ್ರಸಾದ ಸದರ್ ಶಾಫಿ ದಾರಿಮಿ ಅಜ್ಜಾವರ ಸ್ವಾಗತಿಸಿ, ರೇಂಜ್ ನ ಕೋಶಾಧಿಕಾರಿ ಎಂ ಎಂ ಅಝೀಝ್ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಕೂರ್ನಡ್ಕ ಮಸೀದಿ ಅಧ್ಯಕ್ಷ ಖಾಸಿಂ ಹಾಜಿ ಮತ್ತು ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಉಪಸ್ಥಿತರಿದ್ದು, ಮದ್ರಸಾ ಅಧ್ಯಾಪಕರು, ವಿದ್ಯಾರ್ಥಿಗಳ ಹೆತ್ತವರು, ಪೋಷಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










