’ಪ್ರಭು’ಸ್ ಚರುಂಬುರಿ ಲೋಗೋ ಅನಾವರಣಗೊಳಿಸಿದ ತುಳುನಾಡ ಮಾಣಿಕ್ಯ, ನಟ ಅರವಿಂದ ಬೋಳಾರ್ – ಪ್ರಭು ಹೆಸರು ಹಲವಿರಬಹುದು. ಆದರೆ, ಸವಿಯಲು ಒಂದೇ ಚರುಂಬುರಿ ಅದು ’ಪ್ರಭು’ಸ್’

0

ಪುತ್ತೂರು : ಕೊಂಬೆಟ್ಟು ಜಿಎಲ್ ಟ್ರೇಡ್ ಸೆಂಟರ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಭು ಚರುಂಬುರಿ ಇನ್ನು ಮುಂದೆ ’ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್’ ಎಂಬ ಬ್ರ್ಯಾಂಡ್ ನೇಮ್‌ನೊಂದಿಗೆ ಗ್ರಾಹಕರಿಗೆ ಸೇವೆ ನೀಡಲಿದೆ. ಪ್ರಭು’ಸ್ ಚರುಂಬುರಿಯ ಲೋಗೋ ಅನಾವರಣ ಕಾರ್ಯಕ್ರಮ ಮಾ.28ರಂದು ನಡೆದಿದ್ದು, ತುಳುನಾಡ ಮಾಣಿಕ್ಯ ಖ್ಯಾತಿಯ ತುಳು ಚಲನ ಚಿತ್ರ ನಟ ಅರವಿಂದ ಬೋಳಾರ್ ಲೋಗೋ ಲೋಕಾರ್ಪಣೆಗೊಳಿಸಿದರು.


ಚರುಂಬುರಿಯ ಗೋಣಿ ಒಳಗೆ ಇದ್ದ ಆಕರ್ಷಕವಾದ ಚರುಂಬುರಿ ಮಾದರಿಯ ’ಪ್ರಭುಸ್ ಲೋಗೋ’ವನ್ನ ಹೊರಗೆ ತೆಗೆಯುವ ಮೂಲಕ ನೂತನ ಲೋಗೋವನ್ನ ಅನಾವರಣಗೊಳಿಸಲಾಯಿತು.
ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಖ್ಯಾತ ವಕೀಲ ಮಹೇಶ್ ಕಜೆಯವರು ಮಾತನಾಡಿ, ಹೊಸ ಉದ್ಯಮ ಆರಂಭಿಸುವಾಗ ದೂರದ ಉರಿನಲ್ಲಿರುವವರನ್ನು ಸ್ಪೂರ್ತಿಯಾಗಿ ಹೇಳುತ್ತೇವೆ. ಆದರೆ ಪ್ರಭು ಚರುಂಬುರಿ ಹೋಗಿ ಪ್ರಭು’ಸ್ ಚರುಂಬುರಿ ಆಗುವ ಈ ಸಂದರ್ಭದಲ್ಲಿ ನಮ್ಮ ಅಂಗಳದಲ್ಲಿರುವ ನಮ್ಮ ಊರಿನಲ್ಲಿರುವ ರಾಜೇಶ್ ಪ್ರಭು ನಿಜವಾದ ಸ್ಪೂತಿಯಾಗಿ ಕಾಣುತ್ತಾರೆ. ನಿರಂತರ ಪ್ರಯತ್ನ, ಬದ್ಧತೆ, ಗುರಿ ಇದ್ರೆ ಒಬ್ಬ ವ್ಯಕ್ತಿ ಸಂತೆ ಗದ್ದೆಯಿಂದ ಒಂದು ಸುಸಜ್ಜಿತ ಅಂಗಡಿ ಮಾಡುವ ತನಕ ಬೆಳೆಯುತ್ತಾನೆ. ಅದೇ ರುಚಿ ಅದೇ ಸ್ವಾದ, ರಾಜೇಶ್ ಕೂಡ ಅದೇ ರಾಜೇಶ್ ಅದೇ ವ್ಯಕ್ತಿತ್ವ.ಆದ್ರೆ ಹೊಸ ಗೆಟಪ್‌ನೊಂದಿಗೆ ಹೊಸ ಹುಮ್ಮಸ್ಸಿನೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ರಾಜೇಶ್ ಪ್ರಭು ಅವರ ಚರುಂಬುರಿ ತಿಂದ್ರೆ ಹೇಗಿರುತ್ತದೆ ಅಂದ್ರೆ, ಪ್ರಸಾದ್ ಭಂಡಾರಿಗಳು ಇದ್ದಾರೆ. ಪ್ರಸಾದದಷ್ಟೆ ಚರುಂಬುರಿ ತಿಂದರೆ ಸಾಕು ಅರವಿಂದದಂತೆ ಮನಸ್ಸು ಅರಳುತ್ತದೆ. ಇದನ್ನು ನಾವು ಅತ್ಯಂತ ವಿಶ್ವಾಸದಿಂದ ಹೇಳಬಹುದು ವಿಶ್ವಾಸ್ ಶೆಣೈಗಳು ಕೂಡ ಇದ್ದಾರೆ ಎಂದರು. ರಾಜೇಶ್ ಅವರು ಚರುಂಬುರಿ ಸಾಮ್ರಾಜ್ಯದ ರಾಜನಾಗಿ ಮೆರೆಯಲಿ ಎಂದು ಶುಭ ಹಾರೈಸಿದರು.


ಇನ್ನೊರ್ವ ಮುಖ್ಯ ಅತಿಥಿ ಕೆವಿ ಶೆಣೈ ಪೆಟ್ರೋಲ್ ಪಂಪ್ ಮಾಲಕರಾದ ವಿಶ್ವಾಸ್ ಶೆಣೈ ಮಾತನಾಡಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ನ ಎಂ.ಬಿ.ಎನಲ್ಲಿ ಕೇಸ್ ಸ್ಟಡಿ ಎನ್ನುವ ವಿಷಯ ಇದೆ. ಈ ಕೇಸ್ ಸ್ಟಡಿಗೆ ತಕ್ಕ ಒಂದು ಉದಾಹರಣೆ ಅಂದ್ರೆ ಅದು ರಾಜೇಶ್ ಅಣ್ಣ. ನಾನು ಸುಮಾರು ೨೫ ವರ್ಷಗಳಿಂದ ಇವರನ್ನು ನೋಡುತ್ತಿದ್ದೇನೆ. ಜಾತ್ರೆಯ ಗದ್ದೆಯಿಂದ ಈ ಒಂದು ಅಂಗಡಿಗೆ ಬರಬೇಕಾದರೆ ಅವರ ಪಯಣವನ್ನು ಖಂಡಿತವಾಗಿಯೋ ಎಂಬಿಎ ಕಾಲೇಜಿನಲ್ಲಿ ಕೇಸ್ ಸ್ಟಡಿಯಾಗಿ ಅಳವಡಿಸುವುದಕ್ಕೆ ನಾನು ಪ್ರಯತ್ನ ಮಾಡುತ್ತೇವೆ. ಸಣ್ಣ ಗಾಂಧಾರಿ ಮೆಣಸು ಹಾಕಿದ ಖಾರ ಅಂದ್ರೆ ಬಹಳ ಖಾರವಾಗಿರುವ ಸ್ಪೆಷಲ್ ರಾಕೆಟ್ ಚರುಂಬುರಿಯನ್ನ ಪರಿಚಯಿಸಿದ್ದು ರಾಜೇಶ್ ಪ್ರಭು. ಹೀಗೆ ಸುಮಾರು ಬಗೆಯ ಸ್ಪೆಷಲ್ ಚರುಂಬುರಿಯನ್ನ ಜನರಿಗೆ ಪರಿಚಯಿಸಿದ ಪ್ರಭು’ಸ್ ಚರುಂಬುರಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.


ಆದರ್ಶ ಆಸ್ಪತ್ರೆಯ ವೈದ್ಯರಾದ ಪ್ರಸಾದ್ ಭಂಡಾರಿಯವರು ಮಾತನಾಡಿ, ಪ್ರಭು ಚರುಂಬುರಿ ಅಂದ್ರೆ ತುಂಬಾ ಪೇಮಸ್.. ಮೊನ್ನೆ ಗದ್ದೆಗೆ ಹೋದಾಗ ಪ್ರಭು ಚರುಂಬುರಿ ಹೆಸರಿನ ಸ್ಟಾಲ್ ಒಂದಲ್ಲ ಹತ್ತು ಇತ್ತು. ಆವಾಗಲೇ ನಾನು ಹೇಳಿದೆ ರಾಜೇಶ್ ಪ್ರಭು ಅವರು ಲೋಗೋ ಒಂದು ಬೇರೆ ಮಾಡಬೇಕು ಎಂದು. ರಾಜೇಶ್ ಪ್ರಭು ಮಾಡುವ ಚರುಂಬುರಿ ತುಂಬಾ ಸ್ಪೆಷಲ್. ಪ್ರಭು ಪರಿಶ್ರಮ ಜೀವಿ. ಇಂತಹ ವ್ಯಕ್ತಿಗೆ ದೇವರು ಅನುಗ್ರಹ ಮಾಡಿದ್ದಾರೆ. ನಾನು ವಾರದಲ್ಲಿ ಒಂದು ದಿನ ತಪ್ಪದೆ ಇಲ್ಲಿಗೆ ಬರುತ್ತೇನೆ. ಆಸ್ಪತ್ರೆಯ ಸಿಸ್ಟರ‍್ಸ್‌ಗಳಿಗೆ ಹಾಗೂ ಕೆಲಸದವರಿಗೆ ಚರುಂಬುರಿ ತೆಗೆದುಕೊಂಡು ಹೋಗುತ್ತೇನೆ. ಪ್ರಭು’ಸ್ ಚರುಂಬುರಿ ಐಡಿಯಲ್ ಐಸ್‌ಕ್ರೀಮ್‌ನಂತೆ ಆಗಬೇಕು. ದ.ಕ ಜಿಲ್ಲೆಯ ಎಲ್ಲಾ ಕಡೆ ಪ್ರಭು’ಸ್ ಚರುಂಬುರಿ ಇರಬೇಕು. ಚರುಂಬುರಿ ಇಸ್ ನಾಟ್ ಎ ಜಂಕ್ ಫುಡ್… ಇಟ್‌ಇಸ್ ಎ ಗುಡ್ ಫುಡ್. ರಾಜೇಶ್ ಪ್ರಭುವವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಕೊನೆಗೆ ಅರವಿಂದ್ ಬೋಳಾರ್ ಅವರ ಕಲಾಚಾತ್ಯುರ್ಯವನ್ನ ಹೊಗಳಿದ ಪ್ರಸಾದ್ ಭಂಡಾರಿಯವರು ಅರವಿಂದ್ ಬೋಳಾರ್ ದಕ್ಷಿಣ ಕನ್ನಡ ಜಿಲ್ಲೆಯ ರಾಜ್‌ಕುಮಾರ್ ಎಂದರು.


ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್ ಅವರು ಮಾತನಾಡಿ, ಪ್ರಭು ಚರುಂಬುರಿಗೆ 6 ವರ್ಷಗಳ ಹಿಂದೆ ನಾನು ಬಂದಿದ್ದೆ. ಇದೀಗ ಮತ್ತೆ ಬಂದಿದ್ದೇನೆ.. ಇದು ನನ್ನ ಭಾಗ್ಯ. ರಾಜೇಶ್ ಪ್ರಭು ಅವರು ಒಂದು ಚರುಂಬುರಿ ಮೂಲಕ ಅಭಿವೃದ್ಧಿಯಾಗಿದ್ದಾರೆ ಅಂದರೆ ಇದಕ್ಕಿಂತ ದೊಡ್ಡದು ಏನು ಬೇಕು. ಒಂದು ಹೆಣ್ಣು ಕೈ ಹಿಡಿದರೆ ಹೆಣ್ಣಿನಿಂದ ನನಗೆ ಒಳ್ಳೆದಾಗಿದೆ ಎಂದು ಹೇಳುತ್ತಾರೆ. ರಾಜೇಶ್ ಪ್ರಭು ಚರುಂಬುರಿ ಹಿಡಿದು ಅಭಿವೃದ್ಧಿಯಾಗಿದ್ದಾರೆ. ನಿದ್ರೆ ಎಲ್ಲಾ ಬಿಟ್ಟು ಪರಿಶ್ರಮದಿಂದ ಕೆಲಸ ಮಾಡಿದ್ದಾರೆ. ಸಂಸ್ದೆಯಲ್ಲಿ 6 ಜನ ಒಟ್ಟಿಗೆ ಸೇರಿ ಟೀಂ ವರ್ಕ್ ಇದೆ. ಹಾಗಾಗಿ ದೇವರ ಆರ್ಶೀವಾದ ಯಾವಾಗಲೂ ಇರುತ್ತದೆ. ಪ್ರಭು’ಸ್ ಚರುಂಬುರಿ ಉತ್ತಮ ಹೆಸರು. ತುಂಬಾ ಪ್ರಭು ಸ್ಟಾಲ್ ಇದೆ. ಒಳ್ಳೆ ಟೇಸ್ಟ್ ಇರುವ ಚರುಂಬುರಿಯೂ ಇದೇ ಹೆಸರಿನಲ್ಲಿ ಇದ್ರೆ ಯಾವುದು ಎಂದು ಗೊತ್ತಾಗುವುದಿಲ್ಲ. ಪ್ರಭು’ಸ್ ಒಂದೇ ಇರುವುದರಿಂದ ಎಲ್ಲರೂ ಇಲ್ಲಿಗೆ ಬರುತ್ತಾರೆ. ಪ್ರಭು’ಸ್ ಅನೇಕ ಬ್ರ್ಯಾಂಚ್‌ಗಳಾಗಿ ಬೆಳೆಯಲಿ. ಇವತ್ತು ಮಾತ್ರ ಅಲ್ಲ ಪ್ರತಿ ದಿನ ನೀವು ಬಂದ್ರೆ ಅದೇ ಅವರಿಗೆ ನೀವು ಮಾಡುವ ಆರ್ಶೀವಾದ. ರಾಜೇಶ್ ಪ್ರಭು ಅವರ ಪ್ರಭು’ಸ್ ಚರುಂಬುರಿ ಮೇಲೆ ದೇವರ ಆರ್ಶಿವಾದ ಇರಲಿ ಎಂದು ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಭಾವನ ಕಲಾ ಆರ್ಟ್‌ನ ವಿಘ್ನೇಶ್ ವಿಶ್ವಕರ್ಮ, ಪಶುಪತಿ ಇಲೆಕ್ಟ್ರಿಕಲ್ ಮಾಲಕರಾದ ಪಶುಪತಿ ಶರ್ಮ, ವೆಬ್ ಪೀಪಲ್‌ನ ಮಾಲಕರಾದ ಆದಿತ್ಯ ಕಲ್ಲೂರಾಯ, ಸೆಲ್‌ಝೋನ್‌ನ ಮಾಲಕರಾದ ಜಯಪ್ರಕಾಶ್ ಅಮೈ, ಪ್ರಸನ್ನ ಪ್ರೆಸ್ ಮಾಲಕರಾದ ಗುರುಪ್ರಸಾದ್, ರಾಜೇಶ್ ಪ್ರಭು ಅವರ ಪತ್ನಿ ಪವಿತ್ರ, ಮಕ್ಕಳಾದ ಯಧುವೀರ್, ಲಹರಿ, ಸಹೋದರ ಸುರೇಶ್ ಪ್ರಭು, ಪ್ರಭು’ಸ್ ಸಿಬ್ಬಂದಿಗಳಾದ ಆದರ್ಶ ವಿ ದೇವಕಾರ್ಯ ಮೂಡೋಡಿ ಪರ್ಲಡ್ಕ, ದೇವಿಪ್ರಸಾದ್ ನಾಯಕ್ ಪುರುಷರಕಟ್ಟೆ, ರಮೇಶ್ ಶೆಟ್ಟಿ ಪರ್ಲಡ್ಕ, ಸುಮತಿ ಸೇಡಿಯಾಪು, ಶಾಂತಲ ವೀರಮಂಗಲ, ವರ್ತಕರ ಸಂಘದ ಅಧ್ಯಕ್ಷರಾದ ರವಿಕೃಷ್ಣ ಕಲ್ಲಾಜೆ ಹಾಗೂ ಅತಿಥಿ ಗಣ್ಯರು ಉಪಸ್ಧಿತರಿದ್ದರು. ಆಗಮಿಸಿದ ಎಲ್ಲಾ ಅತಿಥಿಗಳಿಗೆ ಪ್ರಭು’ಸ್ ಚರುಂಬುರಿಯ ಮಾಲಕ ರಾಜೇಶ್ ಪ್ರಭು ಅವರು ಸ್ಮರಣಿಕೆ ನೀಡಿ ಗೌರವಿಸಿದರು. ನಿವೃತ ಉಪನ್ಯಾಸಕರಾದ ರಾಮಚಂದ್ರ ಭಟ್ ಅರ್ಥಪೂರ್ಣವಾಗಿ ಕಾರ್ಯಕ್ರಮ ನಿರೂಪಿಸಿದರು.


ಪ್ರಭು’ಸ್ ಲೋಗೋ ಲಾಂಚ್‌ನ ವಿಶೇಷವಾಗಿ ನವದಂಪತಿಗಳಿಗೆ ವಿಶೇಷ ಕೊಡುಗೆಯನ್ನು ಆಯೋಜಿಸಲಾಗಿದ್ದು 2025ರ ಅಕ್ಟೋಬರ್‌ನಿಂದ 2026ರ ಮಾರ್ಚ್ ತಿಂಗಳಿನ ನಡುವೆ ವಿವಾಹವಾದ ನವದಂಪತಿಗಳಿಗೆ 50% ರಿಯಾಯಿತಿಯನ್ನ ನೀಡಲಾಗಿತ್ತು. ಹಲವು ನವದಂಪತಿಗಳು ಹಾಗೂ ಗ್ರಾಹಕರು ಆಗಮಿಸಿ ಚರುಂಬುರಿ ಸವಿದಿದ್ದಾರೆ.


ಪ್ರಭು ಎನ್ನುವ ಹೆಸರು ಹಲವು ಇರಬಹುದು ಆದ್ರೆ ಪ್ರಭು’ಸ್ ಚರುಂಬುರಿ ಇರುವುದು ಒಂದೇ. ತಿನ್ನಲು ಹಲವು ಚರುಂಬುರಿ ಇರಬಹುದು ಆದ್ರೆ ಸವಿಯಲು ಪ್ರಭು’ಸ್ ಚರುಂಬುರಿ ಒಂದೇ.. ಇಲ್ಲಿ ನಾರ್ಮಲ್ ಚರುಂಬುರಿ ಸವಿದ ಗ್ರಾಹಕರಿಗೆ ಕಾರ್ನ್ ಚರುಂಬುರಿ, ರಾಕೆಟ್ ಚರುಂಬುರಿ, ಡಬಲ್ ಸ್ಪೆಷಲ್ ಚರುಂಬುರಿ, ಜಿಂಜರ್ ಗಾರ್ಲಿಕ್ ಚರುಂಬುರಿ, ಕುಕ್ಕುಂಬರ್ ಚರುಂಬುರಿ, ಗರಿಗರಿ ಚರುಂಬುರಿ, ಬಿರಿಯಾನಿ ಚರುಂಬುರಿ ಹೀಗೆ ಸುಮಾರು 15 ವೆರೈಟಿಯ ಚರುಂಬುರಿಯನ್ನ ಪರಿಚಯಿಸುವ ಮೂಲಕ ಪ್ರಭು ಚರುಂಬುರಿ ತನ್ನದೆ ಗ್ರಾಹಕ ಬಳಗವನ್ನ ಹೊಂದಿದ್ದು, ಹತ್ತೂರಿನಲ್ಲೂ ಫೇಮಸ್ ಆಗಿದೆ.. ಚರುಂಬುರಿಯ ಜೊತೆಗೆ ಚಾಟ್ಸ್, ಜ್ಯೂಸ್, ಬೇಕರಿ ಐಟಂಗಳು ಇಲ್ಲಿ ಲಭ್ಯವಿದೆ.

ನಮ್ಮದೆ ಒಂದು ಬ್ರ್ಯಾಂಡ್ ಆಗಬೇಕು ಎನ್ನುವ ಉದ್ದೇಶದಿಂದ ಪ್ರಭು ಚರುಂಬುರಿ ಹೆಸರನ್ನ ಪ್ರಭು’ಸ್ ಮಾಡಿದ್ದೇವೆ. 12 ವೆರೈಟಿ ಚರುಂಬುರಿ ಇದೆ. ಇನ್ನು ಎರಡು ವೆರೈಟಿಯ ಚರುಂಬುರಿ ಮಾಡಬೇಕು ಎನ್ನುವ ಪ್ಲಾನ್ ಇಟ್ಟುಕೊಂಡಿದ್ದೇವೆ. ಜಾತ್ರಾ ಗದ್ದೆಯಲ್ಲಿ ನಮ್ಮ ಸ್ಟಾಲ್ ಇರಲಿದೆ. ಪ್ರಭು ಚರುಂಬುರಿ ಪ್ರಭು’ಸ್ ಆಗಿ ಬದಲಾಗಿದೆ ಎಲ್ಲರ ಸಹಕಾರವಿರಲಿ.
ರಾಜೇಶ್ ಪ್ರಭು,
ಮಾಲಕರು ಪ್ರಭು’ಸ್ ಚರುಂಬುರಿ & ಚಾಟ್ಸ್

LEAVE A REPLY

Please enter your comment!
Please enter your name here