ಉಪ್ಪಿನಂಗಡಿ : ಭಾರೀ ಗಾಳಿಗೆ ಮುರಿದ 35 ವಿದ್ಯುತ್‌ ಕಂಬಗಳು – ಹಲವು ಮನೆಗಳಿಗೆ ಹಾನಿ

0

ಉಪ್ಪಿನಂಗಡಿ : ಶನಿವಾರ ಸಾಯಂಕಾಲ ಬೀಸಿದ ಭಾರೀ ಬಿರುಗಾಳಿಗೆ ತತ್ತರಿಸಿ ಉಪ್ಪಿನಂಗಡಿ ಸುತ್ತಮತ್ತಲು ಹಲವೆಡೆ ಹಾನಿಯುಂಟಾಗಿದ್ದು, ಹಲವಾರು ಮನೆಗಳಿಗೆ ಹಾಕಲಾಗಿದ್ದ ಶೀಟ್ ಗಳು ಹಾರಿ ಹೋಗಿದ್ದು, 35 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟು ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾದ ಘಟನೆ ವರದಿಯಾಗಿದೆ.


ಉಪ್ಪಿನಂಗಡಿಯ ರಾಮನಗರ ನಿವಾಸಿ ಶೋಭಾ ಎಂಬವರ ಮನೆಯ ಛಾವಣಿ ಗಾಳಿಯ ಹೊಡೆತಕ್ಕೆ ಸಿಲುಕಿ ನುಚ್ಚುನೂರಾಗಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿದ್ದರಿಂದ ಮನೆಯೊಡತಿ ಅತಂತ್ರರಾಗಿದ್ದಾರೆ.


ಇಳಂತಿಲ , ಹಾಗೂ ಪೆದಮಲೆ ಎಂಬಲ್ಲಿ ಮರಗಳು ವಿದ್ಯುತ್ ತಂತ್ರಿಯ ಮೇಲೆ ಬಿದ್ದ ಪರಿಣಾಮ ಪ್ರಧಾನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತಾದರೂ ಮೆಸ್ಕಾಂ ಸಿಬ್ಬಂದಿಗಳ ಸಕಾಲಿಕ ಸ್ಪಂದನದಿಂದಾಗಿ ರಾತ್ರಿ ವೇಳೆ ಪೇಟೆ ಭಾಗಕ್ಕೆ ವಿದ್ಯುತ್ ಸರಬರಾಜನ್ನು ಪುನರಾರಂಭಗೊಳಿಸಲು ಸಾಧ್ಯವಾಯಿತು. ಗ್ರಾಮಾಂತರ ಪ್ರದೇಶದಲ್ಲಿ 14 ಹೆಚ್ ಟಿ ಲೈನ್ ಗಳ ಕಂಬಗಳು ತುಂಡರಿಸಲ್ಪಟ್ಟಿದ್ದು, 21 ಎಲ್ ಟಿ ಲೈನ್ ಗಳ ಕಂಬಗಳು ತುಂಡರಿಸಲ್ಪಟ್ಟಿದೆ. ಈ ಪೈಕಿ ಆದಿತ್ಯವಾರದಂದು 22 ರಷ್ಟು ಕಂಬಗಳನ್ನು ಪುನಃ ಸ್ಥಾಪಿಸಲಾಗಿದ್ದು, ಉಳಿದವುಗಳನ್ನು ಸೋಮವಾರದಂದು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದೆಂದು ಮೆಸ್ಕಾಂ ಅಧಿಕಾರಿ ನಿತೀನ್ ರವರು ತಿಳಿಸಿದ್ದಾರೆ. ಗಾಳಿಯ ಹೊಡೆತಕ್ಕೆ ಸಿಲುಕಿ ಹಲವಾರು ಕಡೆಗಳಲ್ಲಿ ಕೃಷಿ ಬೆಳೆಗಳು ಹಾನಿಗೀಡಾಗಿರುವುದಾಗಿ ಮಾಹಿತಿಗಳು ಬರತೊಡಗಿದೆ .

LEAVE A REPLY

Please enter your comment!
Please enter your name here