ಬಂಗಾರಡ್ಕ ಭಜನಾ ವಾರ್ಷಿಕೋತ್ಸವದಲ್ಲಿ ‘ನೃತ್ಯೋಹಂ’

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ 17ನೇ ವಾರ್ಷಿಕೋತ್ಸವದಲ್ಲಿ ಶುಕ್ರವಾರ ‘ನೃತ್ಯೋಹಂ’ ಭರತನಾಟ್ಯ
ಪ್ರದರ್ಶನಗೊಂಡಿತು.


ಅಕಾಡೆಮಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿದರು. ಈ ಸಂದರ್ಭ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿನೋದ್‌ ಪೂಜಾರಿ ಬಂಗಾರಡ್ಕ, ಕಾರ್ಯದರ್ಶಿ ದೀಪಕ್‌ ನಾಯ್ಕ ಬಂಗಾರಡ್ಕ, ಕೋಶಾಧಿಕಾರಿ ಅಭಿಲಾಷ್‌ ರೈ ಬಂಗಾರಡ್ಕ, ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮವನ್ನು ಮಹಾಬಲ-ಲಲಿತಕಲಾ ಸಭಾ(ರಿ.) ಇದರ ಡಾ.ಶ್ರೀಪ್ರಕಾಶ್‌ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here