ಕುಂಜೂರು ಪಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ

0

 ಬಡಗನ್ನೂರು :  ಕುಂಜೂರು ಪಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಪುತ್ತೂರು,YGC ಕುಂಜೂರು ಪಂಜ,ಶ್ರೀ ದುರ್ಗ ಭಜನಾ ಮಂಡಳಿ ಕುಂಜೂರು ಪಂಜ,  ಗೆಳೆಯರ ಬಳಗ ದೊಡ್ಡಡ್ಕ, ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರ ದೊಡ್ಡಡ್ಕ, ಲಯನ್ಸ್ ಕ್ಲಬ್ ಪುತ್ತೂರು, ನಿಕಟ ಪೂರ್ವ ಆಡಳಿತ ಮಂಡಳಿ ಕುಂಜೂರು ಪಂಜ ಶಾಲೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು .ಹಿರಿಯ ವಿದ್ಯಾರ್ಥಿ ಸಂಘ ಕುಂಜೂರು ಪಂಜ,ಇವರ ಸಂಯುಕ್ತ ಆಶ್ರಯದಲ್ಲಿ   ಪುತ್ತೂರು ರೋಟರಿ – ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಅಮೃತ ಮಹೋತ್ಸವ ಅಂಗವಾಗಿ  ರಕ್ತದಾನ ಶಿಬಿರ 29-ರಂದು ನಡೆಯಿತು.

ಕಾರ್ಯಕ್ರಮವನ್ನು  ಲಯನ್ಸ್ ಕ್ಲಬ್ ಅಧ್ಯಕ್ಷೆ  ಟಿ. ಪ್ರೇಮಲತಾ ರಾವ್  ರವರು  ಉದ್ಘಾಟನೆ ಮಾಡಿ ಶುಭ ಹಾರೖೆಸಿದರು. ಮುಖ್ಯ ಅತಿಥಿ ಪುತ್ತೂರು ಮೆಡಿಕಲ್ ಆಫೀಸರ್  ಡಾ. ರಾಮಕೃಷ್ಣರಾವ್  ರವರು ರಕ್ತದಾನ ಶಿಬಿರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. 

ವೇದಿಕೆಯಲ್ಲಿ  ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಪೂವಪ್ಪ ನಾಯ್ಕ.  ನಿಕಟ ಪೂರ್ವ ಆಡಳಿತ ಮಂಡಳಿ ಕುಂಜೂರು ಪಂಜ,ಅಧ್ಯಕ್ಷ ಗೋಪಾಲ ಭಟ್, ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ  ಜಗದೀಶ ಗೌಡ, ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ ಕುಮಾರ್, ಪುತ್ತೂರು ಲಯನ್ಸ್ ಕಾರ್ಯದರ್ಶಿ  ಅರವಿಂದ ಭಗವಾನ್ ಆರ್ಯಾಪು ಗ್ರಾಮ  ಪಂಚಾಯತ್ ನಿಕಟ ಪೂರ್ವ ಸದಸ್ಯ ವಸಂತ, ವೇದಿಯಲ್ಲಿ  ಉಪಸ್ಥಿತರಿದ್ದರು.

ಸಭೆಯು ಶಾಲಾಭಿವೃದ್ಧಿ ಸಮಿತಿ  ಅಧ್ಯಕ್ಷ  ಶರೀಫ್. ಪಿ ರವರು  ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಪುತ್ತೂರು ರೋಟರಿ -ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ತಂಡದ ನಿಕಟ ಪೂರ್ವ ಅಧ್ಯಕ್ಷ  ಶ್ರೀಧರ ನಾಯಕ್, ಕುಂಜೂರು ಪಂಜ,ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ.ಶ್ರೀನಿವಾಸ, ಆರ್ಯಾಪು ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ಸದಸ್ಯರು,ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು, ಗೌರವ ಶಿಕ್ಷಕರು  ಶಿಕ್ಷಣಾಭಿಮಾನಿಗಳು ಮತ್ತು ಊರಿನವರು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಿ ಸ್ವಾಗತಿಸಿ, ವಂದಿಸಿದರು. 

LEAVE A REPLY

Please enter your comment!
Please enter your name here