ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಭಾಭವನಕ್ಕೆ ಶಿಲಾನ್ಯಾಸ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾ ಭವನಕ್ಕೆ ಮಾ.30ರಂದು ಶಿಲಾನ್ಯಾಸ ನೆರವೇರಿತು.


ದೇವಸ್ಥಾನದ ಅರ್ಚಕ ಮೋಹನ ರಾವ್ ಪಜಿಮಣ್ಣು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಶಿಲಾನ್ಯಾಸ ನೆರವೇರಿಸಿದರು.


ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಜಯಕುಮಾರ್ ನಾಯರ್, ರವಿಚಂದ್ರ ಆಚಾರ್ಯ ಸಂಪ್ಯ, ವಿನ್ಯಾಸ್ ಯು.ಎಸ್., ಪ್ರೇಮ ಶಿವಪ್ಪ ಸಪಲ್ಯ, ಮೀನಾಕ್ಷಿ ಸೇಷಪ್ಪ ಗೌಡ ನೀರ್ಕಜೆ, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ರೈ ಸಂಪ್ಯ, ಕಾರ್ಯದರ್ಶಿ ಶಶಿಕಲಾ ನಿರಂಜನ ರೈ, ಪ್ರಮುಖರಾದ ಶ್ರೀಕೃಷ್ಣ ಭಟ್, ರವೀಂದ್ರ ಸಂಪ್ಯ, ಹರಿಣಿ ಪುತ್ತೂರಾಯ, ರವಿನಾಥ ಗೌಡ ಬೈಲಾಡಿ, ತೇಜಸ್ ಸಂಪ್ಯ, ನವೀನ್ ಕುಕ್ಕಾಡಿ, ವೇಣುಗೋಪಾಲ ಶೆಟ್ಟಿ ಸಂಪ್ಯ, ಉದಯ ಕುಮರ್ ಬಳ್ಳಾಲ್, ರವಿ ಗೌಡ ಬೈಲಾಡಿ, ಉಮೇಶ್ ಗೌಡ ಸಂಪ್ಯ, ಮಂಜಪ್ಪ ಗೌಡ ಬೈಲಾಡಿ, ಕುಶಾಲಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here