






ಪುತ್ತೂರು : ಗ್ರಾಮೀಣ ಭಾಗದ ಜನರಿಗೆ ಸುಲಭ ಹಾಗೂ ಅತ್ಯಾಧುನಿಕ ದಂತ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಗ್ರಾಮೀಣ ಪರಿಸರವಾದ ಕೆಯ್ಯೂರಿನಲ್ಲಿ ನೂತನವಾಗಿ ‘ಚೈತನ್ಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್’ ಮಾರ್ಚ್ 30ರಂದು ಪುತ್ತೂರಿನ ಕೆಯ್ಯೂರು ಶ್ರೀದೇವಿ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.


ಸಂಸ್ಥೆಯ ಮಾಲಕಿ ಡಾ.ಮನೀಷಾ ರೈ ಅವರ ಅಜ್ಜಿ ನಳೀಲು ಗಿರಿಜಾ ರೈ ರಿಬ್ಬನ್ ಕತ್ತರಿಸುವ ಮೂಲಕ ಮತ್ತು ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಶೆಟ್ಟಿ ಅರಿಯಡ್ಕ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿದರು.



ಅತಿಥಿಯಾಗಿ ಆಗಮಿಸಿದ್ದ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಕೆಯ್ಯೂರು ಪುಣ್ಯ ಭೂಮಿಯಾಗಿದ್ದು ದೇವಿ ಕ್ಷೇತ್ರವಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಂಸ್ಧೆ ಬೆಳೆಯಲಿ. ನಗರ ಪ್ರದೇಶದಿಂದ ಜನರು ಇಲ್ಲಿಗೆ ಚಿಕಿತ್ಸೆಗಾಗಿ ಬರುವಂತಾಗಲಿ. ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದು, ಚೈತನ್ಯ ಡೆಂಟಲ್ ಕ್ಲಿನಿಕ್ ಹೆಸರಿಗೆ ತಕ್ಕಂತೆ ದಂತ ಆರೋಗ್ಯ ಬಯಸಿ ಬರುವ ರೋಗಿಗಳಿಗೆ ಚೈತನ್ಯ ನೀಡಲಿ ಎಂದರು.

ಲಕ್ಷ್ಮೀ ನಾರಾಯಣ ಶೆಟ್ಟಿ ಅರಿಯಡ್ಕ ಮಾತನಾಡಿ ತಜ್ಞ ವೈದ್ಯರಿಂದ ಇಲ್ಲಿ ಎಲ್ಲರಿಗೂ ಚಿಕಿತ್ಸೆ ದೊರೆಯಲಿದೆ. ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆಯುವಂತಾಗಲಿ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.
ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಸಾದ್ ಭಂಡಾರಿ ಮಾತನಾಡಿ ದಂತ ವೈದ್ಯೆಯಾಗಿರುವ ಮನೀಷಾ ರೈ ಗ್ರಾಮೀಣ ಭಾಗದಲ್ಲಿ ಜನರಿಗೆ ಸೇವೆ ನೀಡಲು ಮುಂದಾಗಿರುವುದು ತುಂಬಾ ಸಂತೋಷ ತಂದಿದೆ. ದಂತ ಚಿಕಿತ್ಸೆ ಹರಸಿ ಬರುವ ಎಲ್ಲರಿಗೂ ಇಲ್ಲಿ ಉತ್ತಮ ಚಿಕಿತ್ಸೆ ದೊರೆತು ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದರು.
ಇನ್ನೋರ್ವ ಅತಿಥಿ ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಧಾನದ ವ್ಯವಸ್ಧಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ ಚೈತನ್ಯ ಕ್ಲಿನಿಕ್ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲಿ. ಡಾ.ಶಿವಪ್ರಸಾದ್ ಶೆಟ್ಟಿಯವರ ಕ್ಲಿನಿಕ್ನಂತೆ ಅಭಿವೃದ್ಧಿ ಹೊಂದಲಿ ಶುಭ ಹಾರೈಸಿದರು.
ದುರ್ಗಾಪರಮೇಶ್ವರಿ ದೇವಸ್ಧಾನದ ಮಾಜಿ ಅಧ್ಯಕ್ಷ ಎಸ್.ಬಿ ಜಯರಾಮ ರೈ ಮಾತನಾಡಿ ಕೆಯ್ಯೂರು ಬೆಳೆಯುತ್ತಿರುವ ಪ್ರದೇಶವಾಗಿದ್ದು, ಇಲ್ಲಿ ಸುಸಜ್ಜಿತ ಡೆಂಟಲ್ ಕ್ಲಿನಿಕ್ ಶುಭಾರಂಭಗೊಂಡಿರುವುದು ಸಂತೋಷದ ವಿಷಯವಾಗಿದ್ದು, ಎಲ್ಲರಿಗೂ ಇದರ ಪ್ರಯೋಜನ ಸಿಗಲಿ ಎಂದರು.
ಇತ್ತೀಚಿನ ದಿನಗಳಲ್ಲಿ ಹಲ್ಲು ಮತ್ತು ಬಾಯಿಯ ಆರೋಗ್ಯ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದ ಜನರು ಉತ್ತಮ ಚಿಕಿತ್ಸೆಗಾಗಿ ದೂರದ ನಗರ ಪ್ರದೇಶಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ಲಿನಿಕ್ ನೆರವಾಗಲಿದೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದೊಂದಿಗೆ ಈ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಇಂದಿನಿಂದ ಕಾರ್ಯರಂಭಮಾಡಿದ್ದು, ನುರಿತ ವೈದ್ಯರಿಂದ ಚಿಕಿತ್ಸೆ ಲಭ್ಯವಿದೆ.

ಕೆಯ್ಯೂರು ದುರ್ಗಾಪರಮೇಶ್ವರಿ ದೇವಸ್ಧಾನದ ಮಾಜಿ ಸದಸ್ಯ ದಿವಾಕರ್ ರೈ ಸಣ್ಣಂಗಳ, ರಾಮಯ್ಯ ರೈ ತಿಂಗಳಾಡಿ, ಕರುಣಾಕರ್ ರೈ ದೇರ್ಲ, ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್ ಭಂಡಾರಿ, ಡಾ.ಶಿವಪ್ರಸಾದ್ ಶೆಟ್ಟಿ, ಸುಧೀರ್ ರೈ ಪಾಲ್ತಾಡಿ, ಆನಂದ್ ರೈ ದೇವಿನಗರ, ವಿಕಾಸ್ ರೈ ಪಾಲ್ತಾಡಿ, ವಿಶ್ವನಾಥ ರೈ ಕಳಂಜ, ರಮೇಶ್ ರೈ ಸಾಂತ್ಯಾ, ರೂಪರೇಖ ಆಳ್ವಾ, ಹರಿಪ್ರಸಾದ್ ರೈ ತಿಂಗಳಾಡಿ, ಅಮ್ಮಣ್ಣ ರೈ ಪಾಪೆಮಜಲು, ರಮೇಶ್ ರೈ ಅಬ್ಬೆಜಾಲು, ಮೇಣಾಲ ಕೃಷ್ಣತಿಲಕ್ ಭಂಡಾರಿ, ನಳೀಲು ಕಿಶೋರ್ ರೈ, ಶ್ರೀಮತಿ ಮಂಜುಳಾ ರೈ, ಡಾ.ನಿರೀಕ್ಷಾ ರೈ, ನಳೀಲು ಸಂತೋಷ್ ಕುಮಾರ್ ರೈ, ಕುಸುಮಾ ಶೆಟ್ಟಿ ಕೆರೆಕೋಡಿ, ಅರುಣ್ ಕುಮಾರ್ ರೈ ನಳೀಲು, ರಾಜ್ ಮೋಹನ್ ರೈ, ಮೋಹನ್ದಾಸ್ ರೈ ನಳೀಲು, ವಿಖ್ಯಾತ್ ರೈ ನಳಿಲು, ಸಾರ್ಥಕ್ ರೈ, ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಮಹಿಳಾ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷೆ ಸವಿತಾ ಭಂಡಾರಿ, ಮೋನಪ್ಪ ಪೂಜಾರಿ ಪಲ್ಲತಡ್ಕ, ಹರಿಣಾಕ್ಷಿ ಜೆ ರೈ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಂತಿ ಮೋಹನ್ ರೈ ಮಾಡಾವು, ವಿಶ್ವನಾಥ್ ರೈ ನಡುಕೂಟೇಲು, ವಿನೋದ್ ರೈ ಪಾಲ್ತಾಡು, ಶ್ರೀಧರ ಗೌಡ ನೆಲಕ್ಕಲ, ವಿಶ್ವನಾಥ ಪೂಜಾರಿ ಕೆಂಗುಡೇಲು, ವೈಶಾಕ್, ಮನೋಹರ್ ರೈ ಎಂಡೆಸಾಗು ಸೇರಿದಂತೆ ಹಲವರು ಉಪಸ್ಧಿತರಿದ್ದು, ನೂತನ ಸಂಸ್ಧೆಗೆ ಶುಭ ಹಾರೈಸಿದರು.
ತಜ್ಞ ವೈದ್ಯರಿಂದ ಇಲ್ಲಿ ಚಿಕಿತ್ಸೆ ದೊರೆಯಲಿದೆ. ಅವಶ್ಯಕತೆಗೆ ಅನುಗುಣವಾಗಿ ಬೇಕಾದಂತಹ ತಜ್ಞ ವೈದ್ಯರು ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ. ಎಲ್ಲರ ಸಹಕಾರವಿರಲಿ.
ಡಾ.ಮನೀಷಾ ರೈ. ಚೈತನ್ಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್










