ಪುಣಚ ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ನೂತನ ತರವಾಡು ಮನೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆ- ಬ್ರಹ್ಮಕಲಶ

0

ಪುಣಚ: ಇಲ್ಲಿನ ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ತರವಾಡು ಮನೆ ನೂತನವಾಗಿ ನಿರ್ಮಾಣಗೊಂಡು ನೂತನ ತರವಾಡು ಮನೆ ಗೃಹಪ್ರವೇಶ, ಹಾಗೂ ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ.30ರಂದು ನಡೆಯಿತು.

ಬೆಳಿಗ್ಗೆ ಮಹಾಗಣಪತಿ ಹೋಮ ಬಳಿಕ 9.36ರ ಶುಭ ಮುಹೂರ್ತದಲ್ಲಿ ನೂತನ ಮನೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಬ್ರಹ್ಮಕಲಶಾಭಿಷೇಕ, ತಂಬಿಲಸೇವೆ, ನಿತ್ಯ ನೈಮಿತ್ತಿಗಳ ನಿರ್ಣಯ, ಪ್ರಾರ್ಥನೆ, ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಬಳಿಕ ಶ್ರೀ ವೆಂಕಟ್ರಮಣ ದೇವರ ಪಾನಕಪೂಜೆ ಪ್ರಸಾದ ವಿತರಣೆ ನಡೆದು ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ವಿವಿಧ ಗಣ್ಯರು ಸೇರಿದಂತೆ ಕುಟುಂಬಸ್ಥರು, ಬಂಧುಗಳು, ಮಿತ್ರರು, ಗ್ರಾಮಸ್ಥರು ಪಾಲ್ಗೊಂಡು ದೈವಗಳ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here