ಪರವೂರಿನಲ್ಲಿರುವ ಪುತ್ತೂರಿನವರು : ಸಹಾಯಕ ಪೊಲೀಸ್‌ ಉಪನಿರೀಕ್ಷಕ ಕುರಿಯ ಮಾವಿನಕಟ್ಟೆಯ ಸತೀಶ್ ಅವರಿಗೆ ಮುಖ್ಯಮಂತ್ರಿ ಪದಕ

0

ಪುತ್ತೂರು: ಸಹಾಯಕ ಪೊಲೀಸ್‌ ಉಪನಿರೀಕ್ಷಕ (ASI) ಕುರಿಯ ಗ್ರಾಮದ ಮಾವಿನಕಟ್ಟೆಯ ಸತೀಶ್ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿದೆ.

ಏ. 2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪದಕ ಸ್ವೀಕಾರ ಮಾಡಲಿದ್ದಾರೆ.ಸತೀಶ್ ಅವರು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿನಿಗ್ರಹ ದಳ, ಅಪರಾಧ ಪತ್ತೆ ದಳ, ಸೈಬರ್ ಅಪರಾಧ ಪತ್ತೆ ದಳ, ಜಿಲ್ಲಾ ವಿಶೇಷ ತನಿಖಾ ತಂಡ ಹಾಗೂ ನಕ್ಸಲ್ ನಿಗ್ರಹ ಪಡೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು .

ಇವರು ಪಣಂಬೂರು, ಸುರತ್ಕಲ್, ಮುಲ್ಕಿ, ಪಾಂಡೇಶ್ವರ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಬಜೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಮಾದಕ ವಸ್ತು ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸತೀಶ್ ಅವರು ಕುರಿಯ ಗ್ರಾಮದ ಮಾವಿನಕಟ್ಟೆದಿ. ಬಾಬು ಪೂಜಾರಿ ಮತ್ತು ಶಿವಮ್ಮ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here