






ಪುತ್ತೂರು: ಸವಣೂರು ಗ್ರಾಮದ ಆರೇಲ್ತಡಿ ಇರ್ವೆರು ಉಳ್ಳಾಕ್ಲು, ಕೆಡೆಂಜೋಡಿತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ಹಾಗೂ ಸಮುದಾಯಭವನ ಉದ್ಘಾಟನೆ ಏ.22 ರಂದು ನಡೆಯಲಿದೆ.


ಸಮಾರಂಭದ ಅಮಂತ್ರಣ ಪತ್ರವನ್ನು ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮಾ.27 ರಂದು ಬೆಂಗಳೂರಿನ ಅವರ ನಿವಾಸದಲ್ಲಿ ನೀಡಿ, ಕಾರ್ಯಕ್ರಮಕ್ಕೆ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅವರು ಆಹ್ವಾನಿಸಿದರು.



ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರನ್ನು ಗೌರವಿಸಲಾಯಿತು. ರಾಜ್ಯ ಬಿಜೆಪಿ ಮಾಧ್ಯಮ್ ಪ್ರಮುಖ್ ಪ್ರಶಾಂತ್ ಕೆಡೆಂಜಿ ಸುರೇಶ್ ಕುಂಡಡ್ಕ, ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಮುಗೇರಡ್ಕ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಪ್ರಕಾಶ್ ಕುದ್ಮನಮಜಲು ಉಪಸ್ಥಿತರಿದ್ದರು










