ಬಡಗನ್ನೂರು: ಅಪ್ರಾಪ್ತನಿಗೆ ಹಲ್ಲೆ – ಪ್ರಕರಣದ ಆರೋಪಿ ತಪ್ಪಿತಸ್ಥ-ಕೋರ್ಟ್‌ ಆದೇಶ

0

ಪುತ್ತೂರು:ವರ್ಷದ ಹಿಂದೆ ಬಡಗನ್ನೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕನಿಗೆ ಹಲ್ಲೆ ನಡೆಸಿದ ಆರೋಪಿತ ತಪ್ಪಿತಸ್ಥನೆಂದು ಪುತ್ತೂರು ನ್ಯಾಯಾಲಯ ಆದೇಶಿಸಿದೆ.


2025ರ ಜೂ.2ರಂದು ಬಡಗನ್ನೂರು ಗ್ರಾಮದ 15 ವರ್ಷ ಪ್ರಾಯದ ಅಪ್ರಾಪ್ತ ಬಾಲಕನಿಗೆ ಕೈಯಿಂದ ಕೆನ್ನೆಗೆ, ಕುತ್ತಿಗೆಗೆ ಹೊಡೆದು ಅವಾಚ್ಯ ಶಬ್ದದಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಅಬ್ದುಲ್ ರವೂಫ್ (25ವ.)ಎಂಬಾತನ ವಿರುದ್ಧ ಬಾಲರ್ಕ ತಾಯಿ ರಮ್ಲ ಎಂಬವರು ದೂರು ನೀಡಿದ್ದರು.

ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ನಡೆಸಿ ಹೆಡ್ ಕಾನ್ಸ್ಟೇಬಲ್ ರಾಧಾಕೃಷ್ಣ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಹೆಚ್ಚುವರಿ ಹಿರಿಯ ವ್ಯವಹಾರಿಕ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ದೇವರಾಜ್ ವೈ.ಎಚ್.ಅವರು ಆರೋಪಿತ ಅಬ್ದುಲ್ ರವೂಫ್ ತಪ್ಪಿತಸ್ಥ ಎಂದು ಪರಿಗಣಿಸಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಪಿ.ಒ ಆ್ಯಕ್ಟ್‌ ನಲ್ಲಿ ಬಿಡುಗಡೆಗೊಳಿಸಲಾಗಿದೆ.ಪ್ರಾಸಿಕ್ಯೂಶನ್ ಪರ ಸಹಾಯ ಸರ್ಕಾರಿ ಅಭಿಯೋಜಕಿ ಕು.ಚೇತನಾ ದೇವಿ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here