ಪುತ್ತೂರಿನಲ್ಲಿ ಉದ್ಯೋಗಮುಖಿ ಶಿಕ್ಷಣದಲ್ಲಿ ಅಕ್ಷಯ ಸಂಸ್ಥೆಯ ಹೊಸ ಕ್ರಾಂತಿ : ಅಕ್ಷಯ ಕೆರಿಯರ್ ಅಕಾಡೆಮಿಯಿಂದ ಶೇ.100ರಷ್ಟು ಉದ್ಯೋಗ ಭರವಸೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ದಾರಿ

0

ಪುತ್ತೂರು: ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಉದ್ಯೋಗಮುಖಿ ಶಿಕ್ಷಣದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿರುವ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಕ್ಷಯ ಕೆರಿಯರ್ ಅಕಾಡೆಮಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಏವಿಯೇಶನ್ ಶಾರ್ಟ್ ಟರ್ಮ್ ಕೋರ್ಸ್ ಅನ್ನು ಕಲ್ಪಿಸಿ ಯಶಸ್ವಿಯಾಗಿ ಆರಂಭಿಸಿ, ವಿದ್ಯಾರ್ಥಿಗಳಿಗೆ ನೇರ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದ ಪ್ರಥಮ ಸಂಸ್ಥೆಯಾಗಿ ಹೆಸರಾಗಿದೆ.

ಈಗಾಗಲೇ ವಿದ್ಯಾರ್ಥಿಗಳ ಜೀವನದಲ್ಲಿ ಸ್ಪಷ್ಟವಾದ ಬದಲಾವಣೆ ತರುತ್ತಿರುವ ಈ ಅಕಾಡೆಮಿ, ನವೀನ ತಂತ್ರಜ್ಞಾನ, ಉದ್ಯಮದ ಅಗತ್ಯಗಳಿಗೆ ಹೊಂದುವ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸುತ್ತಿದೆ. ವೃತ್ತಿಪರ ಶಿಕ್ಷಣದ ಮೂಲಕ ಭದ್ರ ಭವಿಷ್ಯ ನಿರ್ಮಾಣಕ್ಕೆ ನಂಬಿಕೆಯ ಕೇಂದ್ರವಾಗಿ ಹೊರಹೊಮ್ಮಿದೆ.

ಶೇ 100ರಷ್ಟು ಉದ್ಯೋಗ ಭರವಸೆ – ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿ:
ಅಕ್ಷಯ ಕ್ಯಾರಿಯರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದು ಸಾಧನೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ನಮಿತ, ಸುರಕ್ಷಾ, ಯಶೋಧಾ, ಹಿಮಾಲಿ ಮಡ್ತಿಲ, ನಿದಿಶ್ರೀ. ಕೆ ಇವರು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಹಾಗೂ ಯು.ಎಸ್ ಮೋಹನ್ ಆಚಾರ್ಯ ಮಂಗಳೂರು ಏರ್‌ಪೋರ್ಟ್‌ಗಳಲ್ಲಿ ಯಶಸ್ವಿಯಾಗಿ ಉದ್ಯೋಗವನ್ನು ಪಡೆದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ. ಈ ಸಾಧನೆ, ಅಕಾಡೆಮಿ ನೀಡುತ್ತಿರುವ ತರಬೇತಿ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳನ್ನು ನೇರವಾಗಿ ಉದ್ಯೋಗ ಕ್ಷೇತ್ರಕ್ಕೆ ತಲುಪಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಕೋರ್ಸ್‌ಗಳು ಮತ್ತು ವಿಶೇಷ ಸೌಲಭ್ಯಗಳು(ಏವಿಯೇಷನ್‌ ಮತ್ತು ಏರ್ ಪೋರ್ಟ್ ಮ್ಯಾನೇಜ್ಮೆಂಟ್):
ವಿಮಾನಯಾನ ಕ್ಷೇತ್ರದ ಕಾರ್ಯಪದ್ಧತಿ, ಗ್ರೌಂಡ್ ಸ್ಟಾಫ್ ತರಬೇತಿ, ಪ್ರಯಾಣಿಕರ ನಿರ್ವಹಣೆ ಮತ್ತು ಏರ್‌ಪೋರ್ಟ್ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ಜ್ಞಾನ ನೀಡಲಾಗುತ್ತದೆ.


ಲಾಜಿಸ್ಟಿಕ್ ಮತ್ತು ಸಪ್ಲ್ಯಾ ಚೈನ್ ಮ್ಯಾನೇಜ್ಮೆಂಟ್:
ಉತ್ಪನ್ನಗಳ ಉತ್ಪಾದನೆಯಿಂದ ಗ್ರಾಹಕರಿಗೆ ತಲುಪುವವರೆಗೆ ಸಾಗಣೆ, ಗೋದಾಮು ನಿರ್ವಹಣೆ, ಸರಬರಾಜು ಸರಣಿಯ ಯೋಜನೆ ಹಾಗೂ ಜಾಗತಿಕ ವಾಣಿಜ್ಯ ಪ್ರಕ್ರಿಯೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.


ವಿಶೇಷ ಸೌಲಭ್ಯಗಳು..
▪ ಕಡಿಮೆ ಶುಲ್ಕ
▪ ಉಚಿತ ವಿಮಾನ ಪ್ರಯಾಣ
▪ ಉಚಿತ ಪ್ರಾಯೋಗಿಕ ತರಬೇತಿ ಮೆಟೀರಿಯಲ್
▪ ಉಚಿತ ಇಂಡಸ್ಟ್ರಿಯಲ್ ವಿಸಿಟ್
▪ ಶೇ 100ರಷ್ಟು ಉದ್ಯೋಗ ಭರವಸೆ

ಹೆಚ್ಚಿನ ಮಾಹಿತಿಗಾಗಿ:
ಅಕ್ಷಯ ಕೆರಿಯರ್ ಅಕಾಡೆಮಿ
ಆರಾಧ್ಯ ಆರ್ಕೇಡ್, ದರ್ಬೆ, ಪುತ್ತೂರು
📞 08251 200611, 8088381678, 8105727611

LEAVE A REPLY

Please enter your comment!
Please enter your name here