







ಎ.5ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ


ಪುತ್ತೂರು: ಕೆಯ್ಯೂರು ವಲಯ ಕಾಂಗ್ರೆಸ್ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಕಾರ್ಯಕರ್ತರ ಭೇಟಿ ಕಾರ್ಯಕ್ರಮ ಎ.5ರಂದು ಬೆಳಿಗ್ಗೆ ಗಂಟೆ 11ರಿಂದ ಕೆಯ್ಯೂರು ಗ್ರಾಮದ ವಿವಿಧೆಡೆ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅನೇಕ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.



ಕೆಯ್ಯೂರು ಗ್ರಾಮದ ಜನತಾ ಕಾಲೋನಿ ಪ.ಜಾತಿ ರಸ್ತೆ ಉದ್ಘಾಟನೆ, ಮಾಡಾವು ಕಟ್ಟೆ ರಿಕ್ಷಾ ತಂಗುದಾಣ ಉದ್ಘಾಟನೆ, ದಟ್ಟ-ಪಾತುಂಜ ರಸ್ತೆ ಗುದ್ದಲಿ ಪೂಜೆ, ಮಾಡಾವು ಸಣಂಗಳ ರಸ್ತೆ ಗುದ್ದಲಿ ಪೂಜೆ, ಕೆಯ್ಯೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ತಡೆಗೋಡೆಗೆ ಗುದ್ದಲಿ ಪೂಜೆ, ಪಲ್ಲತ್ತಡ್ಕ-ಅಡ್ಯೇಯಿ-ದೇವಳಿಕೆ ರಸ್ತೆ ಗುದ್ದಲಿ ಪೂಜೆ, ಕಣಿಯಾರು ಸಿ.ಆರ್.ಸಿ ರಸ್ತೆ ಗುದ್ದಲಿಪೂಜೆ, ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರೂ.5 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ, ರೂ.2 ಕೋಟಿ ವೆಚ್ಚದ ಶೇಕಮಲೆ-ದೇರ್ಲ-ಕೆಯ್ಯೂರು ರಸ್ತೆ ಉದ್ಘಾಟನೆ, ಎರಕ್ಕಳ-ಕೋಡಂಬು ರಸ್ತೆ ಗುದ್ದಲಿ ಪೂಜೆ, ಮೇರ್ಲ-ಕೋಡಂಬು ರಸ್ತೆ ಮತ್ತು ಕೋಡಂಬು ಕೊಪ್ಪಳ-ಮೇರ್ಲ ರಸ್ತೆ ಗುದ್ದಲಿ ಪೂಜೆ, ತೆಗ್ಗು-ಬಲ್ಕಾಡ್ ರಸ್ತೆ ಗುದ್ದಲಿ ಪೂಜೆ ಹಾಗೂ ನೂಜಿ-ಮೇರ್ಲ-ಬಲ್ಕಾಡ್ ರಸ್ತೆ ಗುದ್ದಲಿ ಪೂಜೆ ನಡೆಯಲಿದೆ ಎಂದು ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಯಂತ್ ಪೂಜಾರಿ ಕೆಂಗುಡೇಲು, ಪ್ರಧಾನ ಕಾರ್ಯದರ್ಶಿ ಕೆ.ಎಂ ಹನೀಫ್ ಮಾಡಾವು ಹಾಗೂ ಖಜಾಂಜಿ ಅಬ್ದುಲ್ ಖಾದರ್ ಮೇರ್ಲ ತಿಳಿಸಿದ್ದಾರೆ.
ಕೆಯ್ಯೂರು ಗ್ರಾಮಕ್ಕೆ ಶಾಸಕರು ನೀಡಿದ ಅನುದಾನ ವಿವರ:
ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರಸ್ತೆ- ರೂ.5.00 ಕೋಟಿ, ಶೇಖಮಲೆ-ದೇರ್ಲ-ಕೆಯ್ಯೂರು ರಸ್ತೆ- ರೂ.2 ಕೋಟಿ ಅನುದಾನ, ಬೇರಿಕೆಮಜಲುವಿನಿಂದ ಕೋಡಂಬು ರಸ್ತೆ ಅಭಿವೃದ್ಧಿ- ರೂ.10 ಲಕ್ಷ, ಅರಿಕ್ಕಿಲ ಎಂಬಲ್ಲಿ ರಸ್ತೆ ಅಭಿವೃದ್ಧಿ- ರೂ.10 ಲಕ್ಷ, ತೆಗ್ಗು ಬಲ್ಕಾಡು ರಸ್ತೆ ಕಾಂಕ್ರೀಟಿಕರಣ -ರೂ.5 ಲಕ್ಷ, ಓಲೆಮುಂಡೋವು ಮಸೀದಿ ಬಳಿ ರಸ್ತೆ ಕಾಂಕ್ರೀಟಿಕರಣ- ರೂ.5 ಲಕ್ಷ, ಶಾಲಾ ಬಳಿ ಕೇಶವ ಸಾಮಾಜಿ ಮನೆಯಿಂದ ದೇವಿನಗರ ಅಂಬೇಡ್ಕರ್ ಭವನ ತನಕ ರಸ್ತೆ ಕಾಂಕ್ರೀಟಿಕರಣ ರೂ.5 ಲಕ್ಷ, ಸಂತೋಷ್ನಗರ ಪಾತುಂಜ ರಸ್ತೆ ಕಾಂಕ್ರೀಟಿಕರಣ-ರೂ.5 ಲಕ್ಷ, ಇಳಂತಾಜೆ ರಸ್ತೆ ಕಾಂಕ್ರೀಟಿಕರಣ -ರೂ.15 ಲಕ್ಷ, ಕಟ್ಟತ್ತಾರು ಹಳೆಮಾರು ರಸ್ತೆ ಅಭಿವೃದ್ಧಿ -ರೂ.15 ಲಕ್ಷ, ದೇವಿನಗರ ಕೆಯ್ಯೂರು ಬೈಲು ಹೋಗುವ ರಸ್ತೆ ಅಭಿವೃದ್ಧಿ -ರೂ.20 ಲಕ್ಷ, ಕೆಂಗುಡೇಲು ಕೊಡ್ಯಾಣ ಸಂಪರ್ಕ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಶಾಲಾ ಬಳಿ ಸಣಂಗಳ ರಸ್ತೆ ಅಭಿವೃದ್ಧಿ -ರೂ.5 ಲಕ್ಷ, ಮಾಡಾವು ಕಟ್ಟೆ ಎಂಬಲ್ಲಿ ರಿಕ್ಷಾ ನಿಲ್ದಾಣ – ರೂ.5 ಲಕ್ಷ, ತೆಗ್ಗು ಓಲೆಮುಂಡೋವು ಮಸೀದಿ ರಸ್ತೆ ಅಭಿವೃದ್ಧಿ – ರೂ.18 ಲಕ್ಷ, ಮೇರ್ಲ ನೂಜಿ ಎರಕ್ಕಳ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಕಟ್ಟತ್ತಾರು ಕೋಡಂಬು ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಸಂತೋಷ್ನಗರ ಉನ್ನಿಮಾರು ಪಂಜಿಗುಡ್ಡೆ ಕೆಪಿಎಎಸ್ ಕೆಯ್ಯೂರು ಪ.ಪಂ ರಸ್ತೆ ಅಭಿವೃದ್ಧಿ -ರೂ.5 ಲಕ್ಷ, ಅಂಕತ್ತಡ್ಕ ಜನತಾ ಕಾಲನಿ ಗರಡಿ ಪರಿಶಿಷ್ಠ ಜಾತಿ ಕಾಲನಿ ಸಂಪರ್ಕ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಮಾಡಾವು ಸಣಂಗಳ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಕೋಡಂಬು ಎರಕ್ಕಳ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ತೆಗ್ಗು ಬಲ್ಕಾಡ್ ಸಂಪರ್ಕ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಸಣಂಗಳ ದಟ್ಟ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಪಲ್ಲತ್ತಡ್ಕ ದೇವಳಿಕೆ ಕೆಂಗುಡೇಲು ಅಡ್ಯೇಯಿ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಮೇರ್ಲ ಕೋಡಂಬು ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಕಣಿಯಾರುನಿಂದ ಸಿಆರ್ಸಿ ಕಾಲನಿಗೆ ಹೋಗುವ ಸಂಪರ್ಕ ರಸ್ತೆ ಅಭಿವೃದ್ಧಿ -ರೂ.10 ಲಕ್ಷ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಇದರ ಅಭಿವೃದ್ಧಿ -ರೂ.10 ಲಕ್ಷ, ಕೆಪಿಎಸ್ ಶಾಲೆಯ ಬಳಿಯಿಂದ ಉನ್ನಿಮಾರು ರಸ್ತೆ ಅಭಿವೃದ್ಧಿ -ರೂ.1.25 ಲಕ್ಷ, ಕೆಪಿಎಸ್ ಶಾಲಾ ಬಳಿ ಹೈಮಾಸ್ಕ್ ಲೈಟ್ ಅಳವಡಿಕೆ -ರೂ.1.25 ಲಕ್ಷ, ಪರ್ತ್ಯಡ್ಕ ಅಬ್ಬೆಜಾಲು ಎಂಬಲ್ಲಿ ಹೈಮಾಸ್ಕ್ ಲೈಟ್ ಅಳವಡಿಕೆ- ರೂ.1.25 ಲಕ್ಷ, ಕಣಿಯಾರು ಬೈಲಿನ ದಂಬೆತಡ್ಕ ಓಡಪಲ್ಲ ಬಾಲ್ತಿಕುಮೇರು ಎಂಬಲ್ಲಿ ಸೇತುವೆ- ರೂ. 1.65 ಕೋಟಿ ಅನುದಾನ ನೀಡಿದ್ದಾರೆ.










