ಎ.5 ರಿಂದ 11: ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ 50 ನೇ ವರ್ಷದ ಉರೂಸ್ ಮುಬಾರಕ್ – 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ

0

ಪುತ್ತೂರು: ಇರ್ದೆ ಸೀರೆ ಹೊಳೆಯ ಬಳಿ ಭಾವೈಕ್ಯ ಕೇಂದ್ರವಾಗಿರುವ ಇರ್ದೆ-ಪಳ್ಳತ್ತಡ್ಕ ದರ್ಗಾ ಶರೀಫ್‌ನಲ್ಲಿ 50ನೇ ವರ್ಷದ ಉರೂಸ್ ಮುಬಾರಕ್ ಹಾಗೂ 7 ದಿನಗಳ ಧಾರ್ಮಿಕ ಮತ ಪ್ರಭಾಷಣವು ಎ.5 ರಿಂದ ಪ್ರಾರಂಭಗೊಂಡು ಎ.11ರ ತನಕ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞಿ ಹಾಜಿ ಕೊರಿಂಗಿಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಉರೂಸ್ ಮುಬಾರಕ್‌ನಲ್ಲಿ ಪ್ರತಿದಿನ ರಾತ್ರಿ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಪ್ರಾರಂಭ ದಿನವಾದ ಎ.5ರಂದು ನಡೆಯುವ ಕಾರ್ಯಕ್ರಮದಲ್ಲಿ ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್ ಆಲಿ ತಂಙಳ್ ಕೊಂಬೋಲ್ ಅವರು ಉದ್ಘಾಟಿಸಲಿದ್ದಾರೆ. ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್‌ಹಾಜ್ ಸಯ್ಯಯ್ಯದ್ ಹಾಶಿಂ ಬಾಅಲವಿ ತಂಙಲ್ ಕೊರಿಂಗಿಲ ದುಃವಾ ನೆರವೇರಿಸಲಿದ್ದಾರೆ. ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಎ.6ರಂದು ರಾತ್ರಿ ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎ.7ರಂದು ರಾತ್ರಿ ಕೇರಳದ ಪತ್ತನಾಪುರದ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಅವರು ಪ್ರಭಾಷಣ ಮಾಡಲಿದ್ದಾರೆ. ಎ.8ರಂದು ಡಾ| ಹಾಫಿಳ್ ಜುನೈದ್ ಚೌಹರಿ ಕೊಲ್ಲಂ ಕೇರಳ ಅವರು ಪ್ರಭಾಷಣ ಮಾಡಲಿದ್ದಾರೆ. ಎ.9ರಂದು ರಾತ್ರಿ ಪೇರೋಡ್ ಮುಹಮ್ಮದ್ ಅಝ್ಹರಿ ಕೇರಳ ಅವರು ಪ್ರಭಾಷಣ ಮಾಡಲಿದ್ದಾರೆ. ಎ.10ರಂದು ರಾತ್‌ರಿ ಪುತ್ತೂರು ಕೇಂದ್ರ ಜುಮಾ ಮಸ್ಜಿದ್‌ನ ಮುದರ್ರಿಸ್ ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾ ಆಶೀರ್ವಚನ ನೀಡಲಿದ್ದಾರೆ. ಕಾಸರಗೋಡು ಮೆಲ್ವರಂಬ್ ಅಶ್ರಫ್ ರಹ್ಮಾನಿ ಚೌಕಿ ಅವರು ಪ್ರಭಾಷಣ ಮಾಡಲಿದ್ದಾರೆ. ಎ.11ರಂದು ಸಂಜೆ ಗಂಟೆಗೆ ಕೊರಿಂಗಿಲ ಜುಮಾ ಮಸೀದಿಯ ಖತೀಬ ಅಲ್‌ಹಾಜ್ ಜಿ.ಎಚ್ ಅಯ್ಯೂಬ್ ವಹಬಿ ಅವರ ನೇತೃತ್ವದಲ್ಲಿ ಉರೂಸ್ ಸಮಾರೋಪ ನಡೆಯಲಿದೆ. ಸಂಜೆ ಗಂಟೆ 5ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಕೆ.ಎಂ.ಎ.ಕೊಡುಂಗೈ ಫಾಝಿಲ್ ಹನೀಫಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ವಿಧಾನಸಭೆ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 9ಕ್ಕೆ ಶಮೀರ್ ದಾರಿಮಿ ಕೊಲ್ಲಂ ಕೇರಳ ಅವರು ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕೊರಂಗಿಲ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ, ಉರೂಸ್ ಕಮಿಟಿ ಅಧ್ಯಕ್ಷ ಶಾಹುಲ್ ಹಮೀದ್ ಕೊರಿಂಗಿಲ, ಪ್ರಧಾನ ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಸಲಹಾ ಸಮಿತಿ ಸದಸ್ಯ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here