ಕೆಮ್ಮಾಯಿ ವಿಷ್ಣು ಯುವಕ ಮಂಡಲದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕೆಮ್ಮಾಯಿ ಶ್ರೀವಿಷ್ಣು ಯುವಕ ಮಂಡಲದ 29ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರು ದಯಾನಂದ ಗೌಡ ಕೆಮ್ಮಾಯಿ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲದ ಕಛೇರಿಯಲ್ಲಿ ನಡೆಯಿತು.


ಸಭೆಯಲ್ಲಿ ಅಧ್ಯಕ್ಷ ದಯಾನಂದ ಗೌಡ ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಸಭೆಗೆ ಮಂಡಿಸಿದರು.
ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುರೇಂದ್ರ ಪೂಜಾರಿ ಬಡಾವು, ಪ್ರದಾನ ಕಾರ್ಯದರ್ಶಿಯಾಗಿ ಅಶೋಕ ಹೊಸಹೋಕ್ಲು, ಸಂಚಾಲಕರಾಗಿ ದಯಾನಂದ ಗೌಡ ಕೆಮ್ಮಾಯಿ, ಗೌರವ ಅಧ್ಯಕ್ಷರಾಗಿ ಸುಧಾಕರ್ ನಾೖಕ್ ಕೆಮ್ಮಾಯಿ, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಬಡಾವು, ಜತೆ ಕಾರ್ಯದರ್ಶಿಯಾಗಿ ವಿಜಯ್ ಕಾರ್ತಿಕ್ ಬಡಾವು, ಕೋಶಾಧಿಕಾರಿಯಾಗಿ ಪ್ರಶಾಂತ್ ಬೋವುದಕಾಡು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾಗೇಶ್ ಟಿ.ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಭರತ್ ಗೌಡ ಕುಂಟ್ಯಾನ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಕೆಮ್ಮಾಯಿ (ಭಾರತ್ ) ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ದಾಖಲೆ ಪುಸ್ತಕ, ಕೀಲಿ ಕೈ ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನಾೖಕ್

LEAVE A REPLY

Please enter your comment!
Please enter your name here