ಈಶ್ವರಮಂಗಲ:ಶ್ರೀ ಕೃಷ್ಣ ವೆಜಿಟೇಬಲ್ಸ್ & ಫ್ರುಟ್ಸ್ ಸ್ಥಳಾಂತರ

0

ಪುತ್ತೂರು:ಈಶ್ವರಮಂಗಲ ಪೇಟೆಯಲ್ಲಿ ಕಳೆದ 20 ವರ್ಷಗಳಿಂದ ವ್ಯವಹಾರ ನಿರತರಾಗಿ ಗ್ರಾಹಕರ ನಂಬಿಕೆ,ವಿಶ್ವಾಸ ಗಳಿಸುವ ಮೂಲಕ ಮನೆ ಮಾತಾಗಿರುವ ಶ್ರೀ ಕೃಷ್ಣ ವೆಜಿಟೇಬಲ್ಸ್ ಮತ್ತು ಫ್ರುಟ್ಸ್ ಸಂಸ್ಥೆ ಸ್ಥಳೀಯ ಶ್ರೀ ಗಣೇಶ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಏ.4ರಂದು ಶುಭಾರಂಭಗೊಂಡಿದೆ.

ತರಕಾರಿ,ಹಣ್ಣು ಹಂಪಲು ಮಾರಾಟ ಹಾಗೂ ಕೊಬ್ಬರಿ ಖರೀದಿ ವ್ಯವಹಾರ ನಿರತ ಸಂಸ್ಥೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ ಅವರು ದೀಪಬೆಳಗಿಸಿ ಶುಭಹಾರೈಸಿದರು.ಕಟ್ಟಡ ಮಾಲಕ ಮುಳಿಪಡ್ಪು ಗಣೇಶ್ ರೈ,ಅವರ ಮಗ ಮುಳಿಪಡ್ಪು ಅಜಿತ್ ರೈ,ಸ್ಥಳೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ವೈದ್ಯಾಧಿಕಾರಿಗಳು,ಸಂಘ ಸಂಸ್ಥೆಗಳ ಪ್ರಮುಖರು,ವರ್ತಕರು ಸೇರಿದಂತೆ ನೂರಾರು ಮಂದಿ ಆಗಮಿಸಿ ಸಂಸ್ಥೆಯ ಯಶಸ್ಸಿಗೆ ಶುಭಕೋರಿದರು.

ಸಂಸ್ಥೆಯ ಮಾಲಕರಾದ ಜಯಾನಂದ ಕೋರಿಗದ್ದೆ ದಂಪತಿ ಅತಿಥಿ,ಅಭ್ಯಾಗತರನ್ನು ಸ್ವಾಗತಿಸಿ,ಕಳೆದ 20 ವರ್ಷಗಳಿಂದ ಗ್ರಾಹಕರ ಪ್ರೋತ್ಸಾಹ ಸಹಕಾರದಿಂದ ಸಂಸ್ಥೆ ಯಶಸ್ವಿಯಾಗಿ ಮುನ್ನಡೆದಿದ್ದು ಇದೀಗ ಗ್ರಾಹಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ನೂತನ ವಾಣಿಜ್ಯ ಸಂಕೀರ್ಣ ಶ್ರೀ ಗಣೇಶ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿಯೂ ನಿರಂತರ ಪ್ರೋತ್ಸಾಹ ನೀಡಿ ಸಹಕರಿಸುವಂತೆ ವಿನಂತಿಸಿದರು.

LEAVE A REPLY

Please enter your comment!
Please enter your name here