






ಪುತ್ತೂರು: ಕೂರ್ನಡ್ಕ ನಿವಾಸಿ, ಗಣೇಶ್ ಬೀಡಿ ಕಂಟ್ರಾಕ್ಟರ್ ಆಗಿದ್ದ ಸೀದಿಕುಂಞಿ ಹಾಜಿ ನಿಧನರಾಗಿದ್ದಾರೆ.


ವಯೋಸಹಜ ಅನಾರೋಗ್ಯದಿಂದಿದ್ದ ಅವರು ಇಂದು ಸಂಜೆ ವೇಳೆಗೆ ಕೂರ್ನಡ್ಕದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಮೃತರು, 3 ಗಂಡು 2 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.













