ನಿವೃತ್ತ BSNL ಉದ್ಯೋಗಿಗಳಿಂದ ಸಂಘದ ಕಾರ್ಯಕ್ರಮ ಮತ್ತು ಸ್ನೇಹಕೂಟ

0

ಪುತ್ತೂರು: ಇದೇ ಎಪ್ರಿಲ್ 4ನೇ ಶನಿವಾರದಂದು, ಪುತ್ತೂರಿನ ರಸ್ತೆಯ ಬ್ಲಡ್ ಬ್ಯಾಂಕ್ ಬಳಿಯಲ್ಲಿರುವ ಅನುರಾಗ ವಠಾರದ ಸಭಾಂಗಣದಲ್ಲಿ ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿಗಳ ಸಂಘದ (AIBDPA) ಕಾರ್ಯಕ್ರಮ ಹಾಗೂ ಸ್ನೇಹಕೂಟವನ್ನು ಜೊತೆಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಸಂಘದ ಅಧ್ಯಕ್ಷರಾದ ವಿ. ಚಂದ್ರಶೇಖರ ನಾಯ್ಕ್ ಅವರು ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತರ ಪ್ರಸ್ತುತ ಸ್ಥಿತಿಗತಿಗಳು ಹಾಗೂ ಭವಿಷ್ಯದಲ್ಲಿ ಪಿಂಚಣಿದಾರರು ಎದುರಿಸಬೇಕಾದ ಸವಾಲುಗಳ ಬಗ್ಗೆ ವಿವರ ನೀಡುತ್ತಾ, ಸ್ಮಾರ್ಟ್ ಫೋನ್ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮನದಟ್ಟು ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಲ್ ಇಂಡಿಯಾ ಆರ್ಗನೈಸೇಷನ್ ಕಾರ್ಯದರ್ಶಿಗಳಾದ ಬಿ. ಪಿ. ನಾರಾಯಣರು ಮಾತನಾಡುತ್ತಾ, ಪ್ರಸ್ತುತ ಪಿಂಚಣಿದಾರರ ಪರವಾಗಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಕುಂದಾಪುರ ಘಟಕದ ಕಾರ್ಯದರ್ಶಿ ಕುಮಾರನ್ ಪರಿಯಲ್ ಮತ್ತು ಕರ್ನಾಟಕ ವಲಯದ ಉಪಕಾರ್ಯದರ್ಶಿ ತಿಮ್ಮಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪುತ್ತೂರು ವಲಯದ ಕಾರ್ಯದರ್ಶಿಗಳಾದ ರಂಗನಾಥ ರಾವ್ ವರದಿ ವಾಚಿಸಿದರು. ಸಂಚಾಲಕಿ ಶಂಕರಿ ಶರ್ಮ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸದಸ್ಯರಾದ ದಾಮೋದರ್ ಕೆ. ಪ್ರಾರ್ಥಿಸಿದರು. ಅಗಲಿದ ನಿವೃತ್ತ ಸಹೋದ್ಯೋಗಿ ಬಂಧುಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ ಬಳಿಕ ಎಲ್ಲರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಬಳಿಕ ಮೋಜಿನ ಆಟಗಳನ್ನು, ಜೋಸೆಫ್ ಡಿ’ಸೋಜಾ ಮತ್ತು ಶಂಕರಿ ಶರ್ಮ ನಡೆಸಿಕೊಟ್ಟರು. ಹಾಡು, ಹಾಸ್ಯ ಇತ್ಯಾದಿ ಮನರಂಜನೆಗಳು ನಡೆದವು. ಕೊನೆಯಲ್ಲಿ ಸಹಭೋಜನರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here