






ಪುತ್ತೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಇದರ ಲಯನ್ಸ್ ಕ್ಲಬ್ ಪುತ್ತೂರು ಕಾವು ಪ್ರಾಯೋಜಕತ್ವದಲ್ಲಿ 2 ದಿನಗಳ ಲಯನ್ಸ್ ಕ್ವೆಸ್ಟ್ ‘,ಎಸ್.ಎಫ್.ಎ’ ಶಿಕ್ಷಕರ ತರಬೇತಿ ಕಾರ್ಯಾಗಾರವು ಏ.6 ರಂದು ಆರಂಭಗೊಂಡಿದ್ದು ಏ.7 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಪರಾಹ್ನ ಕೊನೆಗೊಳ್ಳಲಿದೆ.


ಲಯನ್ಸ್ ಕ್ವೆಸ್ಟ್ ಇದರ ಪಿಡಿಜಿ ತರಬೇತುದಾರೆ ಕವಿತಾ ಎಸ್ ಶಾಸ್ತ್ರೀರವರು ಉದ್ಘಾಟನೆಗೊಳಿಸಿದ್ದು ಸಮಾರೋಪ ಕಾರ್ಯಕ್ರಮದಲ್ಲಿ ಲಯನ್ಸ್ ಪಿಡಿಜಿ ಡಾ.ಗೀತಪ್ರಕಾಶ್ ಪಿಎಂಜೆಎಫ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಲಯನ್ಸ್ ರೀಜ್ಹನ್ ಏಳರ ರೀಜ್ಹನ್ ಚೇರ್ ಪರ್ಸನ್ ಆನಂದ ರೈ, ಲಯನ್ಸ್ ಜಿಲ್ಲಾ ಅಂಬಾಸಿಡರ್ ಕಾವು ಹೇಮನಾಥ ಶೆಟ್ಟಿ ಎಂಜೆಎಫ್, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈರವರು ಭಾಗವಹಿಸಲಿದ್ದಾರೆ ಜಿಲ್ಲಾ ಕೋ-ಆರ್ಡೀನೇಟರ್ ಕ್ವೆಸ್ಟ್ ಮಂದಾಕಿನಿ ಎಸ್. ಉಪಾಧ್ಯಾಯ, ಅಸೋಸಿಯೆಟ್ ಜಿಲ್ಲಾ ಕೋ-ಆರ್ಡೀನೇಟರ್ ಕ್ವೆಸ್ಟ್ ರತ್ನ ಚೆರ್ಮನ್ನ, ಜಿಲ್ಲಾ ಚೇರ್ ಪರ್ಸನ್ ಕ್ವೆಸ್ಟ್ ರೂಪಶ್ರೀ ಜೆ.ರೈ, ಪ್ರಾಯೋಜಿಕ ಕ್ಲಬ್ ಆಗಿರುವ ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ದೇವಣ್ಣ ರೈ, ಕೋಶಾಧಿಕಾರಿ ರಮೇಶ್ ಆಳ್ವ ಎ, ಕ್ವೆಸ್ಟ್ ಕಾರ್ಯಕ್ರಮದ ಚೇರ್ ಪರ್ಸನ್ ಬಿ.ಪಾವನರಾಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












